udayavahiniಉದಯವಾಹಿನಿ ಪಾವಗಡ: ಅಪ್ರತಿಮ ಸಂಘಟಕ, ಅಗ್ರಪಂಕ್ತಿಯ ಲೇಖಕ, ರಾಷ್ಟ್ರವಾದಿ ದಾರ್ಶನಿಕರು, ಜನಸಂಘದ ಸ್ಥಾಪಕರಾದ ಪಂಡಿತ್‌ ದೀನದಯಾಳ್‌ ಉಪಾಧ್ಯಾಯ ಅವರ ಆದರ್ಶ, ತತ್ವಗಳು ಇಂದಿಗೂ ಪ್ರಸ್ತುತವಾಗಿವೆ, ಅವರು ದೇಶಕ್ಕೆ ನೀಡಿದ ಕೊಡುಗೆ ಸ್ಮರಣೀಯವಾದುದ್ದು ಎಂದು ಸಮಾಜ ಸೇವಕ ಹಾಗೂ ವಿಧಾನಸಭಾ ಚುನಾವಣೆಯ ಬಿಜೆಪಿ ಟಿಕೆಟ್ ಆಕಾಂಕ್ಷಿ ಕೃಷ್ಣ ನಾಯ್ಕ್ ಹೇಳಿದರು.ಭಾನುವಾರ ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಪಂಡಿತ್ ದೀನದಯಾಳ್ ಉಪಾಧ್ಯಾಯರ 106 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಗೌರವ ಸಮರ್ಪಣೆ ಮಾಡಿ ಅವರು ಮಾತನಾಡಿದರು.ಏಕಾತ್ಮ ಮಾನವತೆಯ ಹರಿಕಾರ, ಪ್ರಖರ ರಾಷ್ಟ್ರವಾದಿ ದೀನದಯಾಳ್ ಉಪಾಧ್ಯಾಯರು ವೈವಿಧ್ಯೆತೆಯಲ್ಲಿ ಏಕತೆ ಹಾಗೂ ವಿವಿಧ ರೂಪಗಳಲ್ಲಿ ಏಕತೆಯ ಪ್ರದರ್ಶನ ಭಾರತೀಯ ಸಂಸ್ಕೃತಿಯ ಚಿಂತನೆಯ ಕೇಂದ್ರ ಬಿಂದುವಾಗಿದ್ದರು, ಅವರ ಜನ್ಮದಿನದಂದು ಇಡೀ ದೇಶವು ಶತ ಶತ ಪ್ರಣಾಮಗಳನ್ನು ಸಲ್ಲಿಸುವ ಮೂಲಕ ಅವರನ್ನು ಸ್ಮರಿಸುವುದು ಮತ್ತು ಅವರ ತತ್ವ ವಿಚಾರಗಳು ದೇಶದ ಮುನ್ನಡೆಗೆ ಮಾರ್ಗದರ್ಶನವಾಗಿವೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಮುರಳಿ, ಮಂಡಲ ಅಧ್ಯಕ್ಷ ರವಿಶಂಕರ್ ನಾಯ್ಕ್, ಪ್ರಧಾನ ಕಾರ್ಯದರ್ಶಿ ಅಶೋಕ್, ಕಾರ್ಯದರ್ಶಿ ಶೇಖರ್ ಬಾಬು, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್, ಪ್ರಸನ್ನ ಕುಮಾರ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!