ಉದಯವಾಹಿನಿ, ಮಾಲೂರು : ಕಾಂಗ್ರೆಸ್ ಪಕ್ಷದ ಸಂಸದ ಡಿ.ಕೆ.ಸುರೇಶ ಅವರು ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ದಕ್ಷಿಣ ಭಾರತವನ್ನು ಪ್ರತ್ಯೇಕ ರಾಷ್ಟ್ರವನ್ನಾಗಿಸಬೇಕು ಎಂಬ ನೀಡಿರುವ ಹೇಳಿಕೆ ಹಸ್ಯಾಸ್ಪದವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ವೈ.ನಾರಾಯಣಸ್ವಾಮಿ ಟೀಕಿಸಿದರು.
ತಾಲೂಕಿನ ಕೊಡೂರು ಗ್ರಾಮದ ಸರ್ಕಾರಿ ಶಾಲಾ ವಾರ್ಷಿಕೋತ್ಸವ ಹಾಗೂ ದಾನಿಗಳಿಂದ ನಿರ್ಮಿಸಿರುವ ಮುಖ್ಯದ್ವಾರ ಹಾಗೂ ರಂಗಮಂದಿರ ಲೋಕಾರ್ಪಣೆ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದವರು ಗಾಬರಿಯಾಗಿದ್ದಾರೆ, ಗೊಂದಲದಲ್ಲಿದ್ದಾರೆ, ರಾಹುಲ್ ಗಾಂಧಿ ಒಂದು ಕಡೆ ಕೇರಳದಿಂದ ಭಾರತ್ ಜೋಡೋ ಯಾತ್ರೆ ಪ್ರಾರಂಭಿಸಿದರೆ, ಮತ್ತೊಂದೆಡೆ ಮಣಿಪುರದಿಂದ ನ್ಯಾಯಾತ್ರೆ ಮಾಡುತ್ತಿದ್ದಾರೆ, ಜೋಡಣೆಗೂ ನ್ಯಾಯಕ್ಕೂ ವ್ಯತ್ಯಾಸ ಕಾಂಗ್ರೆಸ್ ನವರಿಗೆ ಗೊತ್ತಿಲ್ಲ ೮೪ರಲ್ಲಿ ಸಿಕ್ಕರ ಮೇಲೆ ದಂಗೆ, ಕೊಲೆಗಳಾದವು, ಕಾಂಗ್ರೆಸ್ ನವರಿಗೆ ಆಗ ನ್ಯಾಯದ ಬಗ್ಗೆ ಚಕಾರವಿಲ್ಲ, ದೇಶವನ್ನು ಪಾಕಿಸ್ತಾನ ಹಾಗೂ ಬಾಂಗ್ಲಾದೇಶವಾಗಿ ತುಂಡು ತುಂಡು ಮಾಡಿದಾಗ ಚರ್ಚಿಸಲಿಲ್ಲ, ಡಿ.ಕೆ.ಸುರೇಶ್ ಅವರು ಬಜೆಟ್ ಮೇಲೆ ನೀಡಿರುವ ಹೇಳಿಕೆಯನ್ನು ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ದಕ್ಷಿಣ ಭಾರತವನ್ನು ಪ್ರತ್ಯೇಕ ರಾಷ್ಟ್ರವನ್ನಾಗಿ ಮಾಡಬೇಕೆಂದು ಹೇಳಿ ಗೊಂದಲ ಉಂಟು ಮಾಡಿದ್ದಾರೆ. ಅವರು ದೇಶದ ಜನತೆಯ ಕ್ಷಮೆ ಕೇಳಬೇಕು ಅವರ ಅಣ್ಣ ಅಧ್ಯಕ್ಷರಾಗಿರುವುದರಿಂದ ಈ ರೀತಿಯ ಹೇಳಿಕೆ ನೀಡಿದ್ದಾರೆ, ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷದ ೨೦ ಅಭ್ಯರ್ಥಿಗಳು ಮುಂಬರುವ ಚುನಾವಣೆಯಲ್ಲಿ ಗೆಲುವು ಸಾಧಿಸುವುದಿಲ್ಲ ಅಗ್ರಮಾನ್ಯ ನಾಯಕರೇ ಗೆಲ್ಲುವುದಿಲ್ಲ ಬಿಜೆಪಿ ಅಭ್ಯರ್ಥಿಗಳು ೪೦೦ಕ್ಕೂ ಹೆಚ್ಚು ಅಭ್ಯರ್ಥಿಗಳು ಸಂಸತ್ ಚುನಾವಣೆಯಲ್ಲಿ ಗೆಲುವು ಸಾಧಿಸಿ ೩ನೇ ಬಾರಿಗೆ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಕಾಂಗ್ರೆಸ್ ಪಕ್ಷದವರಲ್ಲಿ ಗಾಬರಿ ಗೊಂದಲಗಳು ಉಂಟಾಗುತ್ತಿದೆ.
