ಉದಯವಾಹಿನಿ, ಬೆಂಗಳೂರು: ಶ್ರೀ ವಿಘ್ನೇಶ್ವರ ಉತ್ಸವ ಸಮಿತಿ ವತಿಯಿಂದ ನಗರ ಜೆ.ಸಿ.ನಗರದ ಮುನಿರೆಡ್ಡಿ ಪಾಳ್ಯದಲ್ಲಿ ಅಯೋಧ್ಯಾ ಶ್ರಿರಾಮ ಮಂದಿರ ಉದ್ಘಾಟನೆ ಪ್ರಯುಕ್ತ ಇಂದು ಬೆಳಿಗ್ಗೆ ಶ್ರೀರಾಮನಿಗೆ ವಿಶೇಷ ಪೂಜೆ ನೆರವೇರಿಸಲಾಯಿತು ನಂತರ ನೆರೆದಿದ್ದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ಬೆಳಿಗ್ಗೆ ೧೧ ಗಂಟೆ ಸುಮಾರಿಗೆ ಮುಖ್ಯಬೀದಿಗಳಲ್ಲಿ ಶ್ರೀ ಸತ್ಯಬಂಡೆ ಆಂಜಿನೇಯ ದೇವಸ್ಥಾನದ ಮುಖಾಂತರ ಶ್ರಿರಾಮ ದೇವರ ಮೆರವಣಿಗೆ ನಡೆಸಲಾಯಿತು.
ಮೆರವಣಿಗೆಯು ನಂದಿದುರ್ಗ ರಸ್ತೆ ಜಯಮಹಲ್ , ಎಂ.ಆರ್.ಎಸ್,ಪಾಳ್ಯದಿಂದ ಚಿನ್ನಪ್ಪ ಗಾರ್ಡನ್ ಮುಖ್ಯರಸ್ತೆ, ಶೇಷಾದ್ರಿ ರಸ್ತೆ, ಪೆಮ್ಮಗೌಡ ರಸ್ತೆ, ಮುನಿಸ್ವಾಮಿ ಮಪ್ಪರಸ್ತೆ, ಮಾರ್ಗವಾಗಿ ಶಿವಣ್ಣ ಸರ್ಕಲ್, ಜೆ.ಸಿ ರಸ್ತೆ ಮಾರ್ಗವಾಗಿ ಶ್ರಿ ವಿದ್ಯಾಗಣಪತಿ ದೇವಸ್ಥಾನ ವರೆಗೆ ನಡೆಸಲಾಯಿತು. ಇಂದು ಸಂಜೆ ಶ್ರೀವಿದ್ಯಾಗಣಪತಿ ದೇವಸ್ಥಾನದ ಬಳಿ ಪ್ರಸಾದ ವಿನಿಯೋಗ ಹಮ್ಮಿಕೊಳ್ಳಲಾಗಿದ್ದು, ಭಕ್ತರು ಭಾಗವಹಿಸಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.

Leave a Reply

Your email address will not be published. Required fields are marked *

error: Content is protected !!