
ಉದಯವಾಹಿನಿ,ಚಿತ್ರದುರ್ಗ:ಮುರುಘಾಶ್ರೀ ರಕ್ಷಣೆಗಾಗಿ ಬಸವಪ್ರಭು ಶ್ರೀ ನೇಮಕ ಎಂದು ಕಿಡಿ ಕಾರಿದ್ದರೆ. ಬಸವಪ್ರಭು ಶ್ರೀ ನೇಮಕ ನ್ಯಾಯಸಮ್ಮತವಲ್ಲ ಎಂದು ವೀರಶೈವ ಲಿಂಗಾಯತ ಸಮಾಜದ ಮುಖಂಡರು ವಿರೋಧ ವ್ಯಕ್ತಪಡಿಸಿದ್ದರು. ಮಠದಲ್ಲಿ ದೀಕ್ಷೆ ಪಡೆದ ಕೆಲ ಮಠಾಧೀಶರಿಂದಲೂ ಆಕ್ಷೇಪ ವ್ಯಕ್ತವಾಗಿತ್ತು. ಆದ್ರೆ, ಇದೀಗ ಅಂತಿಮವಾಗಿ ಬಸವಪ್ರಭುಗಳನ್ನೇ ಆಯ್ಕೆ ಮಾಡಲಾಗಿದೆ.ಜೈಲಿನಲ್ಲಿ ಪೀಠಾಧ್ಯಕ್ಷರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮುರುಘಾ ಮಠದ ಪೀಠಾಧ್ಯಕ್ಷ ಶರಣರು ಜೈಲಿನಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಮುರುಘಾಮಠದ ಪೂಜಾ ಕೈಂಕರ್ಯ ಮಾಡಲು ಈ ಹಿಂದೆ ಹೆಬ್ಬಾಳ ಮಠದ ಮಹಾಂತ ರುದ್ರೇಶ್ವರ ಶ್ರೀಗೆ ಮೌಖಿಕವಾಗಿ ಸೂಚಿಸಲಾಗಿತ್ತು. ಆದ್ರೆ, ಇದೀಗ ಮುರುಘಾಮಠದ ಪೂಜಾ ಕೈಂಕರ್ಯಕ್ಕೆ ಬಸವಪ್ರಭು ಶ್ರೀ ನೇಮಕ ಮಾಡಲಾಗಿದೆ.ಅಸಮಾಧಾನ ಹೊರಹಾಕಿದ ಹೆಬ್ಬಾಳ ಶ್ರೀಗಳು ಮುರುಘಾಮಠ ಪೂಜಾ ಕೈಂಕರ್ಯ ಉಸ್ತುವಾರಿ ಬಸವಪ್ರಭು ಶ್ರೀಗೆ ಪೂಜಾ ಕೈಂಕರ್ಯ ಜವಾಬ್ದಾರಿ ನೀಡ್ತಿದ್ದಂತೆ ವಿರೋಧ ಕೂಡ ವ್ಯಕ್ತವಾಗಿದೆ. ಮುರುಘಾ ಸ್ವಾಮಿ ಬಂಧನ ಬಳಿಕ ಪೂಜಾ ಕೈಂಕರ್ಯ ಜವಬ್ದಾರಿ ನಿಭಾಯಿಸಿದ್ದ ಹೆಬ್ಬಾಳ ಶ್ರೀಗಳ ಅಸಮಾಧಾನ ಹೊರಹಾಕಿದ್ದಾರೆ. ನಿನ್ನೆ ಸಂಜೆಯೇ ಮುರುಘಾಮಠದಿಂದ ಹೆಬ್ಬಾಳಕ್ಕೆ ತೆರಳಿದ್ದಾರೆ.