ಉದಯವಾಹಿನಿ, ಕೆ.ಆರ್.ಪುರ: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸ್ವಾಭಿಮಾನಿ ಬಣಕ್ಕೆ ಜನತೆ ಒಂದು ಅವಕಾಶ ನೀಡಲಿದ್ದಾರೆ ಎಂದು ಸ್ವಾಭಿಮಾನಿ ಬಣದ ಅಧ್ಯಕ್ಷ ಕುಪ್ಪಿ ಮಂಜುನಾಥ ಅವರು ತಿಳಿಸಿದರು.
ಮಹದೇವಪುರ ಕ್ಷೇತ್ರದ ವರ್ತೂರಿನ ಶ್ರೀ ಕಾಶೀ ವಿಶಾಲಾಕ್ಷಿ ಸಮೇತ ಶ್ರೀ ಕಾಶೀ ವಿಶ್ವೇಶ್ವರಸ್ವಾಮಿ ಸನ್ನಿದಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು ಈ ಬಾರಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಸ್ವಾಭಿಮಾನಿ ಬಾವುಟ ಹಾರಾಡಲಿದೆ ಎಂದು ನುಡಿದರು.
ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಮೂರು ಬಾರಿಯಿಂದ ಯಾವುದೇ ರೀತಿಯ ಅಭಿವೃದ್ಧಿಯಾಗಿಲ್ಲ, ಅಭಿವೃದ್ಧಿಗಾಗಿ ಈ ಬಾರಿ ಸ್ವಾಭಿಮಾನಿ ಬಣದ ಅಭ್ಯರ್ಥಿಯಾದ ನನ್ನನ್ನು ಜನತೆ ಆರ್ಶಿರ್ವಾದ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಹದೇವಪುರ , ಶಾಂತಿನಗರ . ಸರ್ವಜ್ಞ ನಗರ ರಾರಾಜಿನಗರ ಸೇರಿದಂತೆ ಕೆಲ ಕ್ಷೇತ್ರಗಳಲ್ಲಿ ಮೂಲಭೂತ ಸಮಸ್ಯೆಗಳಿದ್ದು,
ಮುಖ್ಯವಾಗಿ ಮಹದೇವಪುರ ಕ್ಷೇತ್ರದಲ್ಲಿ ಕೆರೆಗಳ ಅಭಿವೃದ್ಧಿಯಾಗಿಲ್ಲ ಇದರ ಬಗ್ಗೆ ಗಮನಹರಿಸುವುದಾಗಿ ಹೇಳಿದರು.
ಮಹದೇವಪುರ ಕ್ಷೇತ್ರದ ವರ್ತೂರಿನಿಂದ ಬೆಂಗಳೂರು ಬಿಬಿಎಂಪಿ ಕಛೇರಿಗೆ ತೆರಳಿ ಬೈಕ್ ಜಾಥ ಮೂಲಕ ಸಾಗಿ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರು ಎಂ. ವೇಣುಗೋಪಾಲ್, ರವಿಶಂಕರ್, ವಿಜಯಕುಮಾರ್, ಜೆ.ಶ್ರೀನಿವಾಸ್, ಬಸವರಾಜು, ಕೆ. ತಿಮ್ಮರಾಜು, ಸೂಚಂದ್ರಶೇಖರ್ ಅಚಾರಿ, ವಿ.ಎಸ್. ಗೋಪಾಲ್ ರಾವ್, ವರಪುರಿ ನಾರಾಯಣಸ್ವಾಮಿ, ಮೊಹಮ್ಮದ್ ಪೀರ್ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.

Leave a Reply

Your email address will not be published. Required fields are marked *

error: Content is protected !!