ಉದಯವಾಹಿನಿ, ಆನೇಕಲ್ : ನಾನು ರಾಜಕೀಯ ಮಾಡಲು ಚುನಾವಣೆಗೆ ಸ್ವರ್ದೇ ಮಾಡಿಲ್ಲ ಜನರ ಸೇವೆಯನ್ನು ಮಾಡಬೇಕು, ಜನರ ಸಂಕಷ್ಠಕ್ಕೆ ಸ್ವಂದಿಸಬೇಕು ಎಂಬುವ ಉದ್ದೇಶದಿಂದ ಚುನಾವಣೆಯಲ್ಲಿ ಸ್ವರ್ದೇ ಮಾಡಿದ್ದೇನೆ ಎಂದು ಬೆಂ. ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ|| ಸಿ.ಎನ್. ಮಂಜುನಾಥ್ ತಿಳಿಸಿದರು.
ಅವರು ತಾಲ್ಲೂಕಿನ ಸರ್ಜಾಪುರ ಬಾಗದ ಹಲವು ಖಾಸಗಿ ಬಡಾವಣೆಗಳಿಗೆ ಖುದ್ದು ಬೇಟಿ ನೀಡಿ ಸಾರ್ವಜನಿಕವಾಗಿ ಮತಯಾಚನೆ ಮಾಡಿ ನಂತರ ಮಾತನಾಡಿದ ಅವರು, ನಾನು ಜಯದೇವ ಆಸ್ಪತ್ತೆಯಲ್ಲಿ ವೈದ್ಯರಾಗಿದ್ದ ಸಂಧರ್ಭದಲ್ಲಿ ಬಡವ, ಬಲ್ಲಿಗ ಎನ್ನದೆ ಎಲ್ಲರಿಗೂ ಸಮಾನವಾದ ಚಿಕಿತ್ಸೆ ನೀಡಿ ಲಕ್ಷಾಂತರ ಜನರ ಆರೋಗ್ಯವನ್ನು ಕಾಪಾಡಿರುವ ಹೆಮ್ಮೆ ನನಗೆ ಇದೆ ಎಂದರು. ಚಿಕಿತ್ಸೆ ಮೊದಲು ಹಣ ಪಾವತಿ ನಂತರ ಎಂಬ ಸಿದ್ದಾಂತದಲ್ಲಿ ನಾನು ಕೆಲಸ ಮಾಡಿದ್ದೇನೆ ಎಂದರು. ಪ್ರದಾನಿ ನರೇಂದ್ರ ಮೋದಿರವರ ಆಡಳಿತದಲ್ಲಿ ಎಲ್ಲಾ ಕ್ಷೇತ್ರಗಳು ಪ್ರಗತಿಯತ್ತಾ ದಾಪುಗಾಲು ಹಾಕುತ್ತಿವೆ ಇನ್ನಷ್ಠು ದೇಶ ಅಭಿಚೃದ್ದಿ ಯತ್ತಾ ಸಾಗಬೇಕಾದರೆ ಏಪ್ರಿಲ್ ೨೬ ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯ ಜನತೆ ಬಿಜೆಪಿ ಪಕ್ಷಕ್ಕೆ ಮತ ನೀಡುವ ಮೂಲಕ ಪ್ರದಾನಿ ಮೋದಿರವರ ಕೈ ಬಲಪಡಿಸಬೇಕು ಎಂದು ಸಾರ್ವಜನಿಕವಾಗಿ ಮನವಿ ಮಾಡಿದರು. ಪ್ರಚಾರದಲ್ಲಿ ಬಿಜೆಪಿ ಮುಖಂಡರಾದ ಕೆ.ವಿ.ಶಿವಪ್ಪ. ಜಯಪ್ರಕಾಶ್, ಸೋಂಪುರ ಪುನೀತ್ ರೆಡ್ಡಿ, ಸುರೇಶ್ ರೆಡ್ಡಿ, ಟಿ.ವಿ.ಬಾಬು ಟಿ.ಸಿ.ಹಳ್ಳಿ ಶ್ರೀನಿವಾಸ್ ರೆಡ್ಡಿ, ಪಿಎಲ್ ಡಿ ಆಂಜಿನಪ್ಪ. ಲಷ್ಮೀನಾರಾಯಣ, ದೊಮ್ಮಸಂದ್ರ ಜಯಣ್ಣ, ರಮೇಶ್ ರೆಡ್ಡಿ, ಅಶೋಕ್ ಮತ್ತು ಬಡಾವಣೆಯ ನಿವಾಸಿಗಳು, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಬಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!