ಉದಯವಾಹಿನಿ, ಬಳ್ಳಾರಿ : ಲೋಕಸಭಾ ಚುನಾವಣೆ ಅಂಗವಾಗಿ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಇಂದು ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಅಪ್ಪೇನಹಳ್ಳಿ, ರಾಯಪುರ, ಮಹದೇವಪುರ, ಗುಡೇಕೋಟೆ ಮೊದಲಾದ ಗ್ರಾಮಗಳಿಗೆ ತೆರಳಿದಾಗ ಆಯಾ ಗ್ರಾಮದ ಮಹಿಳೆಯರು ಅಭ್ಯರ್ಥಿಗೆ ಆರತಿ ಬೆಳಗಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಬಿಜೆಪಿಗೆ ಮತ ನೀಡುವುದಾಗಿ ಭರವಸೆ ನೀಡಿದ್ದು ಕಂಡು ಬಂತು.
ಪಕ್ಷದ ಮುಖಂಡರು ಆಯೋಜಿಸಿದ್ದರೊ ಅಥವಾ ಗ್ರಾಮಸ್ಥರೇ ಸ್ವಿಚ್ಚೆಯಿಂದಲೋ ಗ್ರಾಮಕ್ಕೆ ಬಂದ ಅಭ್ಯರ್ಥಿ ಶ್ರೀರಾಮುಲು, ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್ ಮೊದಲಾದ ಮುಖಂಡರನ್ನು ತಮಟೆ ಬಾರಿಸುತ್ತ, ಪಟಾಕಿ ಸಿಡಿಸಿ ಸಂಭ್ರಮದಿಂದ ಸ್ವಾಗತಿಸಿದರೆ ಮಹಿಳೆಯರು ಕಳಸ ತಂದು ಬೆಳಗಿ ತಿಲಕ ಇಟ್ಟು ದೇಶದ ಸುರಕ್ಷತೆಗಾಗಿ ಸಹೃದಯಿ ನರೇಂದ್ರ ಮೋದಿ ಅವರಂತಹವರು ಮತ್ತೊಮ್ಮೆ ಪ್ರಧಾನಿಯಾಗಬೇಕಿದೆ. ಅದಕ್ಕಾಗಿ ಬಿಜೆಪಿಗೆ ಮತ ನೀಡಲೆಂದರು.
ಈ ವೇಳೆ ಮಾತನಾಡಿದ ಅಭ್ಯರ್ಥಿ ಶ್ರೀರಾಮುಲು, ಸದಾ ಬರಗಾಲ ಸಮಸ್ಯೆ ಎದಿರಿಸುವ ಕೂಡ್ಲಿಗಿ ತಾಲೂಕಿನ ಕೆರೆಗಳನ್ನು ತುಂಬಿಸುವ ಯೋಜನೆ ಬಿಜೆಪಿ ಆಡಳಿತ ಅವಧಿಯಲ್ಲಿ ಆರಂಭಗೊಂಡಿತ್ತು. ಆದರೆ ಈಗಿರುವ ಕಾಂಗ್ರೆಸ್ ಸರ್ಕಾರ ಈ ಯೋಜನೆಗೆ ಹಣ ನೀಡದೆ ಸ್ಥಗಿತಗೊಂಡಿದೆ. ಈ ಹಿಂದೆ ರೂಪಿಸಿದ್ದ ಕುಡಿಯುವ ನೀರಿನ ಯೋಜನೆಯೂ ಸಾಕಾರಗೊಂಡಿಲ್ಲ. ಈ ಯೋಜನೆಗಳು ಸೇರಿದಂತೆ ಈ ಭಾಗದ ಅಭಿವೃದ್ಧಿ ನನ್ನ ಸಂಕಲ್ಪವಾಗಿದೆ. ದೇಶದ ಆರ್ಥಿಕ ಅಭಿವೃದ್ದಿಗಾಗಿ ಬಿಜೆಪಿ ನೇತೃತ್ವದ ಆಡಳಿತ ಅವಶ್ಯವಿದೆ ಎಂಬುದನ್ನು ಅರಿತು ಬಿಜೆಪಿಗೆ ಮತ ನೀಡಿ, ಕಾಂಗ್ರೆಸ್ ನವರು ಬರಗಾಲ ಎಂದು ಕೇವಲ ಎರೆಡು ಸಾವಿರ ನೀಡಿದ್ದಾರೆ. ಆದರೆ ಪ್ರಧಾನಿ ಮೋದಿ ಅವರು ವರ್ಷಕ್ಕೆ ಆರು ಸಾವಿರ ರೂಗಳನ್ನು ರೈತ ಸಮ್ಮಾನ್ ಯೋಜನೆಯಡಿ ಎಲ್ಲಾ ರೈತರಿಗೆ ನೀಡುತ್ತಿದ್ದಾರೆಂದು ಹೇಳಿ. ಕಮಲದ ಗುರ್ತಿಗೆ ಮತ ಹಾಕಿ ಆಶಿರ್ವಾದಿಸಿ ಎಂದು ಮನವಿ ಮಾಡಿದರು‌
ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದೆ.

 

Leave a Reply

Your email address will not be published. Required fields are marked *

error: Content is protected !!