ಉದಯವಾಹಿನಿ, ಆನೇಕಲ್ : ಲೋಕಸಭೆ ಚುನಾವಣೆ ಅಂಗವಾಗಿ ಆನೇಕಲ್ ತಾಲ್ಲೂಕಿನ ಚಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಆನೇಕಲ್ ತಾಲ್ಲೂಕು ಸ್ವೀಪ್ ಸಮಿತಿ ಹಾಗೂ ಚಂದಾಪುರ ಪುರಸಭೆ ಸಹಯೋಗದಲ್ಲಿ ಸಾರ್ವಜನಿಕರಿಗೆ ಹಾಗೂ ಯುವ ಮತದಾರರಿಗೆ ಮತದಾನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಇನ್ನು ಮತದಾನ ಜಾಗೃತಿ ಕಾರ್ಯಕ್ರಮಕಕ್ಕೆ ಚಂದಾಪುರ ಪುರಸಭೆಯ ಮುಖ್ಯಾದಿಕಾರಿ ಶ್ರೀನಿವಾಸ್ ರವರು ಮತ್ತು ಕಂದಾಯ ಅದಿಕಾರಿಯಾದ ಸುದಾಕರ್ ರವರು ಚಾಲನೆ ನೀಡಿ
ಸಾರ್ವಜನಿಕರಿಗೆ ಮತದಾನ ಮಹತ್ವವನ್ನು ತಿಳಿಸಿಕೊಟ್ಟರು ಹಾಗೆಯೇ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಏಪ್ರಿಲ್ ೨೬ ರಂದು ಚುನಾವಣೆ ನಡೆಯಲಿದ್ದು ಮತದಾರರು ತಪ್ಪದೆ ಮತ ಕೇಂದ್ರಗಳಿಗೆ ಹೋಗಿ ಮತದಾನ ಮಾಡುವಂತೆ ಸಾರ್ವಜನಿಕವಾಗಿ ಮನವಿ ಮಾಡಿದರು.
ಇದೇ ಸಂಧರ್ಭದಲ್ಲಿ ಚಂದಾಪುರ ಪುರಸಭೆ ವ್ಯಾಪ್ತಿಯ ಹಲವು ಬಾಗಗಳಲ್ಲಿ ಜಾಥ ನಡೆಸಿ ಸಾರ್ವಜನಿಕರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಚಂದಾಪುರ ಪುರಸಭೆಯ ಕಿರಿಯ ಅಭಿಯಂತರರು ಆದರ್ಶ್. ಲಷ್ಮೀ. ಸಿಬ್ಬಂದಿಗಳಾದ ರೇನಿತಾ. ಸುನೀಲ್. ವೇಣು. ಪ್ರವೀಣ್. ಸುಷ್ಮಾ ಮತ್ತು ಪುರಸಭೆ ಸಿಬ್ಬಂದಿ. ವಾಟರ್ ಮೆನ್ಸ್ ಮತ್ತು ಪೌರ ಕಾರ್ಮಿಕರು. ಸ್ವಾಮಿ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!