ಉದಯವಾಹಿನಿ, ಭಾಲ್ಕಿ: ತಾಲ್ಲೂಕಿನ ಹಲಬರ್ಗಾ ಸಮೀಪದ ಪೆಟ್ರೋಲ್ ಬಂಕ್ ಬಳಿ ಸೋಮವಾರ ಸಂಜೆ ಕಲ್ಯಾಣ ಕರ್ನಾಟಕ ಸಾರಿಗೆಯ ಬಸ್ ಮತ್ತು ಲಾರಿ ಮಧ್ಯೆ ಡಿಕ್ಕಿ ಸಂಭವಿಸಿದೆ.
ಈ ಅಪಘಾತದಲ್ಲಿ ಹೈದರಾಬಾದ್ ನ ಬಾಲಕ ರೋಶನ್ ನರೇಶ ಜಾಧವ್ (8)ಸಾವನ್ನಪ್ಪಿದ್ದಾನೆ.
ಸುಮಾರು 6 ಜನ ಪ್ರಯಾಣಿಕರಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಬೀದರ್ ಡಿಪೆÇೀಗೆ ಸೇರಿದ ಬಸ್ ಭಾಲ್ಕಿಯಿಂದ ಬೀದರ್ ಗೆ ತೆರಳುತ್ತಿತ್ತು. ಬೀದರ್ ಕಡೆಯಿಂದ ಲಾರಿ ಬರುತಿತ್ತು.ಈ ಸಂಬಂಧ ಧನ್ನೂರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
