ಉದಯವಾಹಿನಿ, ಕೋಲಾರ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ಕೋಲಾರ ಮತ್ತು ರೋಟರಿ ಕೋಲಾರ ನಂದಿನಿ ವತಿಯಿಂದ ಸ್ಕೌಟ್ಸ್ ಗೈಡ್ಸ್ ಸಂಸ್ಥೆಯ ಸಾಮ್ರಾಟ್ ರೋವರ್ ಕ್ರೂ ನ ಹಿರಿಯ ರೋವರ್ , ರಾಷ್ಟ್ರಪತಿ ರೋವರ್ ಪ್ರಶಸ್ತಿ ಪುರಸ್ಕೃತರಾದ ಲೇಪ್ಟಿನೆಂಟ್ ಕರ್ನಲ್ ಅಮರನಾಥ್ ರವರಿಗೆ ಶ್ರದ್ದಾಂಜಲಿಯನ್ನು ನಗರದ ಸ್ಕೌಟ್ ಭವನದಲ್ಲಿ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಮುಖ್ಯ ಆಯುಕ್ತರಾದ ಕೆ.ವಿ.ಶಂಕರಪ್ಪ, ಜಿಲ್ಲಾ ಆಯುಕ್ತರಾದ ಕೆ.ಆರ್.ಸುರೇಶ್, ಜಂಟಿ ಕಾರ್ಯದರ್ಶಿ ಉಮಾದೇವಿ, ಸಹ ಕಾರ್ಯದರ್ಶಿ ಸ್ಕೌಟ್ ಬಾಬು, ಸಹಾಯಕ ಜಿಲ್ಲಾ ಆಯುಕ್ತ ವಿಠಲ್ ರಾವ್, ಸ್ಥಾನಿಕ ಆಯುಕ್ತೆ ಅಶ್ವಿನಿ, ರೋವರ್ ಲೀಡರ್ ಚಂದ್ರಶೇಖರಯ್ಯ, ಜಿಲ್ಲಾ ಯುವ ಸಮಿತಿ ಪಧಾಧಿಕಾರಿಗಳಾದ ನಿರಂಜನ್, ಹರೀಶ್, ಶಶಿಕುಮಾರ್, ವೇಣುಗೋಪಾಲ್, ವಸಂತ್ ಗೌಡ, ರಾಜಕುಮಾರ್ ಮುಂತಾದವರು ಉಪಸ್ಥಿತರಿದ್ದರು.
