ಉದಯವಾಹಿನಿ, ಕನಕಪುರ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಳ್ಳುವಂತೆ ಸಹಾಯಕ ಚುನಾವಣಾಧಿಕಾರಿ ರಾಘವೇಂದ್ರ ಮನವಿ ಮಾಡಿದ್ದಾರೆ. ನಗರದಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯತಿ ಸಹಯೋಗದೊಂದಿಗೆ ನಡೆದ ಮತದಾನ ಜಾಗೃತಿ ಜಾಥ ಕಾರ್‍ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಚುನಾವಣೆಯಲ್ಲಿ ಯಾವುದೇ ಲೋಪದೋಷವಾಗದಂತೆ ಎಲ್ಲಾ ರೀತಿಯ ವ್ಯವಸ್ಥೆಯನ್ನು ಚುನಾವಣಾ ಆಯೋಗ ಮಾಡುತ್ತಿದೆ. ಚುನಾವಣಾ ಅಕ್ರಮವನ್ನು ತಡೆಗಟ್ಟಿ ಪಾರದರ್ಶಕವಾದ ಚುನಾವಣೆ ನಡೆಸಲು ಮಾದರಿ ನೀತಿ ಸಂಹಿತೆ ಜಾರಿಗೊಳಿಸಲಾಗಿದೆ ಎಂದು ಹೇಳಿದರು.
ಕನಕಪುರ ವಿಧಾನ ಸಭಾ ಕ್ಷೇತ್ರದಲ್ಲಿ ೨೯೭ ಮತಗಟ್ಟೆಗಳಿವೆ ೨,೨೭,೦೦೦ ಮತದಾರರಿದ್ದು ಏಪ್ರಿಲ್ ೨೬ರಂದು ಚುನಾವಣೆ ನಡೆಯಲಿದೆ. ಅಂದು ನಡೆಯುವ ಮತದಾನದಲ್ಲಿ ಪ್ರತಿಯೊಬ್ಬ ಮತದಾರರು ಪಾಲ್ಗೊಂಡು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುವಂತೆ ಕರೆನೀಡಿದ್ದಾರೆ.
ಈಸಂದರ್ಭದಲ್ಲಿ ತಹಶೀಲ್ದಾರ್. ಸ್ಮಿತಾರಾಮು, ಇ.ಒ. ಬೈರಪ್ಪ, ಪೌರಾಯುಕ್ತ ಮಹದೇವ್, ಪಿ.ಡಿ.ಒಗಳು, ಪಾಲ್ಗೊಂಡಿದ್ದರು. ಈಸಂದರ್ಭದಲ್ಲಿ ತಾಲೂಕು ಪಂಚಾಯತಿ, ನಗರಸಭೆ, ತಾಲೂಕು ಕಚೇರಿ, ಕಾಲೇಜು ವಿದ್ಯಾರ್ಥಿಗಳು, ಈ ಜಾಗೃತಿ ಜಾಥ ಕಾರ್‍ಯಕ್ರಮಲ್ಲಿ ಪಾಲ್ಗೊಂಡಿದ್ದರು.
