ಉದಯವಾಹಿನಿ, ಆನೇಕಲ್ : ಐಪಿಎಲ್ ಮಾದರಿಯಲ್ಲಿಯೇ ಬೊಮ್ಮಸಂದ್ರ ಪುರಸಭೆ ಪ್ರೀಮಿಯರ್ ಲೀಗ್ ನ ೩ ನೇ ಸೀಜನ್ ಗೆ ಗಣ್ಯರು, ಕ್ರೀಡಾಪಟುಗಳು ಚಾಲನೆ ನೀಡಿದರು.
ಬೊಮ್ಮಸಂದ್ರ ಪುರಸಭೆ ಪ್ರೀಮಿಯರ್ ಲೀಗ್ ನ ೩ ನೇ ಸೀಜನ್ ನಲ್ಲಿ ೮ ತಂಡಗಳು ಆಟ ಆಡಲಿದ್ದು, ೬ ವಾರಗಳು ಕ್ರಿಕೆಟ್ ಪಂದ್ಯಾವಳಿಯು ನಡೆಯಲಿದೆ.
ಪಂದ್ಯಾವಳಿಯ ಅಧ್ಯಕ್ಷತೆಯನ್ನು ಬೊಮ್ಮಸಂದ್ರ ಪುರಸಭೆ ಪ್ರೀಮಿಯರ್ ಲೀಗ್ ಅಧ್ಯಕ್ಷ ಬೊಮ್ಮಸಂದ್ರ ಗುರು ಪ್ರಸಾದ್ ರವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಬಿಐಎ ಅಧ್ಯಕ್ಷ ಎ.ಪ್ರಸಾದ್, ಬೊಮ್ಮಸಂದ್ರ ಪುರಸಭೆ ಸದಸ್ಯರಾದ ಚಲಪತಿರವರು, ಬೊಮ್ಮಸಂದ್ರ ಪುರಸಭೆ ಅಧ್ಯಕ್ಷರಾದ ಗೋಪಾಲ್, ಬೊಮ್ಮಸಂದ್ರ ಪುರಸಭೆ ಪ್ರೀಮಿಯರ್ ಲೀಗ್‌ನ ಕಾರ್ಯದರ್ಶಿ ಶಂಕರನ್, ಬೊಮ್ಮಸಂದ್ರ ಮುರುಗೇಶ್, ಬೊಮ್ಮಸಂದ್ರ ಗ್ಯಾಲಕ್ಸಿ ಎಲೆವೆನ್ ತಂಡದ ಮಾಲೀಕರಾದ ಕೀರ್ತಿಕ್, ಬೊಮ್ಮಸಂದ್ರ ರಾಯಲ್ ಚಾಲೆಂಜರ್ಸ್ ತಂಡದ ಮಾಲೀಕರಾದ ಪುನೀತ್ ಪ್ರಸಾದ್, ಬೊಮ್ಮಸಂದ್ರ ಡಿಸಿ ಪ್ರಾಂತ್ರರ್ಸ್ ತಂಡದ ಮಾಲೀಕರಾದ ದಿಲೀಪ್ ಚಲಪತಿ. ಬೊಮ್ಮಸಂದ್ರ ರಾಯಲ್ ಚಾಮ್ಸ್ ತಂಡದ ಮಾಲೀಕರಾದ ಶ್ರೀಧರ್ ಅಂಡ್ ಮಂಜುನಾಥ್, ಕಿತ್ತಗಾನಹಳ್ಳಿ ಎಲ್.ಜಿ.ಎಪ್. ಟಸ್ಕರ್ಸ್ ತಂಡದ ಮಾಲೀಕರಾದ ಆನಂದ್ ಬಾಬು, ಕಿತ್ತಗಾನಹಳ್ಳಿ ರೈಸಿಂಗ್ ಸ್ಟಾರ್‍ಸ್ ತಂಡದ ಮಾಲೀಕರಾದ ಪವನ್, ಬನಹಳ್ಳಿ ರೆನಿಗೇಡ್ಸ್ ತಂಡದ ಮಾಲೀಕರಾದ ಲಿಖಿತ್, ಬನಹಳ್ಳಿ ವಾರಿಯರ್ಸ್ ತಂಡದ ಅಧ್ಯಕ್ಷ ತಿಮ್ಮಾರೆಡ್ಡಿ, ಕ್ರೀಡಾಭಿಮಾನಿಗಳಾದ ಕಿತ್ತಗಾನಹಳ್ಳಿ ರಘು, ಬಹನಹಳ್ಳಿ ಅಭಿ ಮತ್ತು ಕ್ರೀಡಾಪಟುಗಳು ಭಾಗವಹಿಸಿದ್ದರು.
