ಉದಯವಾಹಿನಿ, ಕೆಜಿಎಫ್: ಶ್ರೀ ಪ್ರಸನ್ನಲಕ್ಷ್ಮಿವೆಂಕಟರಮಣಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವದ ಅಂತಿಮ ದಿನದಂದು ಕಳೆದ ೫ ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದ ಚಿನ್ನದ ಪಲ್ಲಕ್ಕಿ ರಥೋತ್ಸವವು ನಡೆಯುವುದೆ ಇಲ್ಲವೇ ಎಂದು ಸಾರ್ವಜನಿಕರ ವಲಯದಲ್ಲಿ ಗೊಂದಲಕ್ಕೆ ಕಾರಣವಾಗಿತ್ತು ಆದರೆ ಯಾವುದೆ ಅಡ್ಡಿಆತಂಕಗಳು ಇಲ್ಲದೆ ಮಾಜಿ ಶಾಸಕ ವೈ,ಸಂಪಂಗಿ ನೇತೃತ್ವದಲ್ಲಿ ಅದ್ದೂರಿಯಾಗಿ ನಡೆಯಿತ್ತು.
ಶ್ರೀ ಪ್ರಸನ್ನಲಕ್ಷ್ಮಿವೆಂಕಟರಮಣಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವದಲ್ಲಿ ಎಲ್ಲಾ ಸಮುದಾಯಗಳಿಗೂ ಉತ್ಸವ ನಡೆಸಲು ಅವಕಾಶವಿದ್ದು
ದಲಿತ ಸಮುದಾಯ ಅಧಿಕ ಸಂಖ್ಯೆಯಲ್ಲಿರುವ ಕೆಜಿಎಫ್ ವಿಧಾನಸಭೆ ಕ್ಷೇತ್ರದಲ್ಲಿ ದಲಿತ ಸಮುದಾಯಕ್ಕೆ ಪಲ್ಲಕ್ಕಿ ಇಲ್ಲದಿರುವುದು ಕ್ಷೇತ್ರದಲ್ಲಿ ಬಹುಸಂಖ್ಯಾತರಾಗಿರುವ ದಲಿತರಿಗೆ ಬೇಸರ ಮೂಡಿರುವುದರಿಂದ ಸರ್ಕಾರ ದಲಿತ ಸಮುದಾಯವು ಬ್ರಹ್ಮರಥೋತ್ಸವದಲ್ಲಿ ಪಲ್ಲಕಿಯನ್ನು ಮಾಡಲು ಅವಕಾಶ ಕಲ್ಪಿಸಬೇಕು ಎಂದ ಸರ್ಕಾರಕ್ಕೆ ಅಂದು ಶಾಸಕರಾಗಿದ್ದ ಸಂಪಂಗಿ ನೇತೃತ್ವದಲ್ಲಿ ದಲಿತ ಸಮುದಾಯವು ಮನವಿ ಸಲ್ಲಿಸಿದ್ದರು ಶಾಸಕರ ಮನವಿಯನ್ನು ಗಂಭೀರವಾಗಿ ಪರಿಗಣಿದ ಸರ್ಕಾರವು ಬ್ರಹ್ಮರಥೋತ್ಸವದ ಅಂತಿಮ ದಿನದಂದು ಉತ್ಸವ ನಡೆಸಲು ಅನುಮತಿ ನೀಡಿತ್ತು ಅಂದಿನಿಂದ ಪ್ರತಿ ವರ್ಷವು ಅದ್ದೂರಿಯಾಗಿ ಚಿನ್ನದ ರಥಥೋತ್ಸವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
