ಉದಯವಾಹಿನಿ, ಸಿಂಧನೂರು: ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ ಸಿಂಧನೂರು ಹಾಗೂ ಸಮಗ್ರ ಶಿಕ್ಷಣ ಕರ್ನಾಟಕ ಸಹಯೋಗದಲ್ಲಿ ನಗರದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ( ಸಿಪಿಸಿ ) ಸಿಂಧನೂರಿನಲ್ಲಿ ಉಚಿತವಾಗಿ ಶಿಬಿರ ನಡೆಸುತ್ತಿದ್ದು ಸುತ್ತ ಮುತ್ತಲಿನ ೫ ರಿಂದ ೯ ನೇ ತರಗತಿ ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಿ ಎಂದು ಶಾಲೆಯ ಮುಖ್ಯ ಗುರುಗಳಾದ ಬಸವರಾಜ ಬಿರದಾರ ಹಾಗೂ ಅಗಸ್ತ್ಯ ಅಂತ ರಾಷ್ತ್ರೀಯ ಪ್ರತಿಷ್ಠಾನ ಮುಖ್ಯಸ್ಥರಾದ ಶಿವಗೇನಪ್ಪ ತಿಳಿಸಿದರು.
ಶಿಬಿರದಲ್ಲಿ ಇಂಜಿನಿಯರಿಂಗ್ ಆಧಾರತ ಕಲಿಕೆ, ಇನೊವೆಷನ್ ತರಗತಿಗಳು ,ಕಡಿಮೆ ವೆಚ್ಚದ ವಿಜ್ಞಾನ ಮಾದರಿ ತಯಾರಿಸುವುದು, ವಿಶೇಷ ಆಟಗಳೊಂದಿಗೆ ರಸಪ್ರಶ್ನೆ ,ಚಿತ್ರಕಲಾ ,ಸಂಗೀತ ಸೇರಿದಂತೆ ವಿವಿಧ ಸ್ಪರ್ಧೆ ಗಳನ್ನು ಏರ್ಪಡಿಸಲಾಗುತ್ತದೆ. ಮಕ್ಕಳಲ್ಲಿ ಕಲಿಕಾ ಮಟ್ಟವನ್ನು ಕಾಯ್ದುಕೊಳ್ಳುವ ಸಲುವಾಗಿ ಈ ಶಿಬಿರ ಹಮ್ಮಿಕೊಂಡಿರುತ್ತೆವೆ ಆದ ಕಾರಣ ಪ್ರತಿಯೊಬ್ಬರೂ ಇದರ ಸದುಪಯೋಗ ಪಡಿಸಿಕೊಳ್ಳಿ ಎಂದು ಪತ್ರಿಕೆ ಮೂಲಕ ತಿಳಿಸಿದರು.
