ಉದಯವಾಹಿನಿ,  ಚಿಟಗುಪ್ಪ: ಪಟ್ಟಣದ ಐತಿಹಾಸಿಕ ಹಿಂಗುಲಾಂಬಿಕಾ ದೇವಿ ಮಂದಿರದಲ್ಲಿ ಇಂದು ಹಿಂದೂರಾಜ್ ಜಯಂತಿ ಆಚರಿಸಲಾಯಿತು. ಹಿಂಗಲಾಜ ಜಯಂತಿಯ ಕುರಿತು ಮಂದಿರದಲ್ಲಿ ಶ್ರೀದೇವಿಗೆ ಮಹಾಭಿಷೇಕ ಮತ್ತು ಪೂಜೆ ಸಲ್ಲಿಸಲಾಯಿತು. ನಂತರ ತಾಯಿಯ ತೊಟ್ಟಿಲ ಕಾರ್ಯಕ್ರಮ ಜರಗಿತು.
ಈ ಸಂದರ್ಭದಲ್ಲಿ ಭಾವಸಾರ್ ಕ್ಷತ್ರಿಯ ಸಮಾಜದ ಅಧ್ಯಕ್ಷರಾದ ಉತ್ತಮರಾವ ಧುಮಾಳೆ, ಉಪಾಧ್ಯಕ್ಷರಾದ ರಾಮರಾವ್ ಮಹಿಂದ್ರಕರ್, ಕಾರ್ಯದರ್ಶಿಗಳಾದ ಅಶೋಕರಾವ್ ಗಂಟೋಜಿ ಭಾವಸಾರ್ ತರುಣ ಮಂಡಳದ ಅಧ್ಯಕ್ಷರಾದ ಮಹೇಶ್ ಮಹೇಂದ್ರಕರ್ ಪ್ರವೀಣ್ ದಂತಕಾಳೆ ಶುಭಂ ರಂಗದಳ ಜೆಟ್ಟಿಂಗರಾವ ಮಹಿಂದ್ರಕರ್ ಸೇರಿದಂತೆ ಸಮಾಜದ ಗಣ್ಯರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

error: Content is protected !!