ಉದಯವಾಹಿನಿ, ಕೂಡ್ಲಿಗಿ : ಪಟ್ಟಣದ ಮಹಿಳಾ ಮತ್ತು ಮಕ್ಕಳ ಶಿಶು ಅಭಿವೃದ್ಧಿ ಇಲಾಖೆಯಲ್ಲಿ ಮಾಜಿ ಉಪಪ್ರಧಾನಿ, ಹಸಿರುಕ್ರಾಂತಿ ಹರಿಕಾರ, ಕಾರ್ಮಿಕರ ಪ್ರಗತಿಗೆ ಶ್ರಮಿಸಿದ ದಲಿತರ ಏಳ್ಗೆಯ ಮಹಾ ಚೇತನ ಡಾ ಬಾಬು ಜಗಜೀವನ ರಾಂ ರವರ 117 ನೇ ಜಯಂತಿಯನ್ನು ಕೂಡ್ಲಿಗಿ ಮಹಿಳಾ ಮತ್ತು ಮಕ್ಕಳ ಶಿಶು ಅಭಿವೃದ್ಧಿ ಇಲಾಖೆಯ ಕಚೇರಿಯಲ್ಲಿ ಬಾಬುಜೀ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ನಂತರ ನಂದಿನಿ ಮಾತನಾಡಿ ಬಾಬುಜಗಜೀವನ್ ರಾಂ ಅವರು ದೇಶ ಕಂಡ ಪ್ರತಿಷ್ಟಿತ ರಾಜಕಾರಣಿ ಆಗಿದ್ದರು ಅಲ್ಲದೆ ದೇಶದ ಉಪಪ್ರಧಾನಿಯಾಗಿದ್ದಾಗ ಅವರು ಜಾರಿಗೆ ತಂದ ಅನೇಕ ಜನಪರ ಯೋಜನೆಗಳು ಇಂದಿಗೂ ಜೀವಂತವಾಗಿದೆ ಗ್ರಾಮದ ಅಭಿವೃಡ್ಡಿ ದೇಶದ ಅಭಿವೃದ್ಧಿ ಎಂಬಂತೆ ತಿಳಿದುಕೊಳ್ಳಬಹುದಾಗಿದೆ ಬಾಬುಜೀ ಆದರ್ಶ ನಿಮಗೆಲ್ಲ ಮಾರ್ಗದರ್ಶನವಾಗಲಿ ಅವರ ತತ್ವಸಿದ್ದಾoತ ಅಳವಡಿಸಿಕೊಳ್ಳುವಂತೆ ತಿಳಿಸಿದರು. ಸಿಡಿಪಿಒ ಕಚೇರಿಯ ಸಿಬ್ಬಂದಿ ಸುರೇಶ ಹಾಗೂ ಇತರರು ಉಪಸ್ಥಿತರಿದ್ದರು.
