ಉದಯವಾಹಿನಿ, ಸೇಡಂ: ತಾಲೂಕಿನ ಸುಕ್ಷೇತ್ರ ಮೋತಕಪಲ್ಲಿ ಶ್ರೀ ಬಲಭೀಮಸೇನ ದೇವಸ್ಥಾನದಲ್ಲಿ 09/04/2024 ರಂದು ಕ್ರೋದಿನಾಮ-ಸಂವತ್ಸರದ ಯುಗಾದಿ ಮಹೋತ್ಸವದ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳು ಈ ಕೆಳಗಿನಂತೆ ಮಾಡಲಾಗುತ್ತಿದೆ ಎಂದು ಶ್ರೀ ದೇವಸ್ಥಾನದ ಶ್ರೀಗಳು ತಿಳಿಸಿದ್ದಾರೆ.
1.ಬೆಳಿಗ್ಗೆ 5:00ಗೆ ಸುಪ್ರಭಾತ 2.ಬೆಳಗ್ಗೆ 8:30ಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಮತ್ತು ಪಂಚಾಂಗದ ಪೂಜೆ.
3.ಸಾಯಂಕಾಲ 5:00ಗೆ ಪಂಚಾಂಗ ಶ್ರವಣ &ಚಿmಠಿ; ಬೇವು ಬೆಲ್ಲ ಪ್ರಸಾದ ವಿತರಣೆ.
4.ಸಾಯಂಕಾಲ 7:30 ಗಜವಾಹನೋತ್ಸವ ಮತ್ತು ತೊಟ್ಟಿಲೋತ್ಸವ ಜರುಗಲಿದೆ.
ಭಾರತದಲ್ಲಿ ಯುಗಾದಿ ಚೈತ್ರ ಮಾಸದ ಮೊದಲ ದಿನ ಈ ದಿನ ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ. “ಯುಗಾದಿ” ಪದದ ಉತ್ಪತ್ತಿ “ಯುಗ+ಆದಿ” – ಹೊಸ ಯುಗದ ಆರಂಭ ಎಂದು.
ಯುಗಾದಿ ಹಬ್ಬದ ಸಾಂಪ್ರದಾಯಿಕ ಆಚರಣೆಗಳಲ್ಲಿ ಕೆಲವೆಂದರೆ ಸೂರ್ಯ ನಮಸ್ಕಾರ, ಪಂಚಾಂಗದ ಪೂಜೆ, ಹಾಗೂ ಸರ್ವೇ-ಸಾಮಾನ್ಯವಾಗಿ “ಬೇವು-ಬೆಲ್ಲ.” ಜೀವನದ ಸಿಹಿ-ಕಹಿಗಳೆರಡನ್ನೂ ಪಡೆಯಬೇಕೆಂದು ನೆನಪಿಸಲು ಬೇವು-ಬೆಲ್ಲಗಳ ಮಿಶ್ರಣವನ್ನು ತಿನ್ನಲಾಗುತ್ತದೆ.
ಯುಗಾದಿಯ ದಿನ ಸುಖದ ಸಂಕೇತವಾದ ಬೆಲ್ಲವನ್ನೂ ಮತ್ತು ಕಷ್ಟದ ಸಂಕೇತವಾದ ಬೇವನ್ನೂ ಸಮನಾಗಿ ಸ್ವೀಕರಿಸುವರು. ತಿಂದ ಮೇಲೆ ಬೆಲ್ಲವು ಹೊಟ್ಟೆಯೊಳಗೆ ಉರಿಯ ಅಥವಾ ಶಾಖವನ್ನು ಉಂಟು ಮಾಡಿದರೆ ಬೇವು ಆ ಉರಿಯ ಶಮನಕಾರಿ. ಬೇವು – ಬೆಲ್ಲದ ಮಿಶ್ರಣವನ್ನು ತಿನ್ನುವಾಗ ಹೇಳುವ ಒಂದು ಶ್ಲೋಕ ಹೀಗಿದೆ.
ಯುಗಾದಿಯ ದಿನ ನಿಂಬಫಲಭಕ್ಷಣದ ಮಂತ್ರ : ಶತಾಯುರ್ವಜ್ರದೇಹತ್ವo ಸರ್ವಸಂಪತ್ಪ್ರದಂ ತಥಾ ಟ ಸರ್ವಾರಿಷ್ಟಹರಂ ಕುರ್ವೇ ನಿಂಬಪತ್ರಾಶನಂ ಶುಭಮ್ ಟಟ ಅದರರ್ಥ ಹೀಗಿದೆ – ನೂರು ವರುಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು ಬೆಲ್ಲ ಸೇವನೆ ಮಾಡುತ್ತೇನೆ. ಪ್ರತಿಯೊಬ್ಬರ ಜೀವನವು ನೋವು-ನಲಿವಿನಿಂದ ಕೂಡಿರುತ್ತದೆ. ಅವುಗಳನ್ನು ಸಮಾನ ದೃಷ್ಟಿಯಲ್ಲಿ ಸ್ವೀಕರಿಸಬೇಕು. ನೋವು ಎದುರಾದಾಗ ದೃತಿಗೆಡದೆ, ನಲಿವಿನಿಂದಾಗಿ ಅಹಂಕಾರಕ್ಕೆ ಒಳಗಾಗದೆ, ಎರಡು ಸಂದರ್ಭದಲ್ಲೂ ಸಮತೋಲನವನ್ನು ಕಾಯ್ದುಕೊಂಡು ಜೀವನವನ್ನು ನಡೆಸಬೇಕು. ಅಂತೆಯೇ ಒಂದು ವರ್ಷ ಎಂದರೆ 365 ದಿನಗಳು ಈ ದಿನಗಳಲ್ಲಿ ಸಂಪೂರ್ಣವಾಗಿ ಸಂತೋಷದಿಂದ ಹಾಗೂ ಕೇವಲ ದುಃಖದಿಂದಲೇ ಕೂಡಿರುವುದಿಲ್ಲ. ಸುಖ-ದುಃಖ ಎರದು ಚಕ್ರದ ರೀತಿಯಲ್ಲಿ ತಿರುಗುತ್ತಿರುತ್ತದೆ. ಆಗ ಎಲ್ಲವನ್ನೂ ಸಮನಾಗಿ ಸ್ವೀಕರಿಸುತ್ತಾ ಸಾಗಬೇಕು ಎನ್ನುವುದೇ ಯುಗಾದಿ ಹಬ್ಬದ ಒಳಾರ್ಥ.
