ಉದಯವಾಹಿನಿ, ಔರಾದ : ಎಮ್.ನಾಮದೇವರಾವ ತಾರೆ ಶಾಲೆಯ 7ನೇ ವರ್ಷದ ಘಟಿಕೋತ್ಸವ ಶಾಲೆ ಅವರಣದಲ್ಲಿ ಪುಟಾಣಿಗಳಿಂದ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಎಂ.ಎಸ್ ಗೋಪಾತೆ ಆಸ್ಪತ್ರೆ ವೈದ್ಯ ಡಾ.ಮಂಚಿಂದರ ರೆಡ್ಡಿ ಅವರು ಮಾತನಾಡಿ ಮನುಷ್ಯನ ಬದುಕಿನಲ್ಲಿ ಶಿಕ್ಷಣ ಅತ್ಯಮೂಲ್ಯವಾದದ್ದು, ಶಿಕ್ಷಣವು ನಮ್ಮಲ್ಲಿ ಹಲವು ಬದಲಾವಣೆಗಳನ್ನು ತರುತ್ತದೆ. ಎಮ್.ಎನ್.ಟಿ ಶಾಲೆ ಮೂಲಕ ವಿದ್ಯಾರ್ಥಿಗಳಲ್ಲಿ ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿದೆ. ಸಮಾಜದಲ್ಲಿ ತನ್ನ ಜವಬ್ದಾರಿಯನ್ನು ಅರಿತು ಬದುಕುವ ಶಿಕ್ಷಣ ಇಲ್ಲಿ ಲಭ್ಯವಾಗುತ್ತಿದೆ ಎಂದರು. ಕೇವಲ 7 ವರ್ಷಗಳಲ್ಲಿ 400ಕ್ಕೂ ಹೆಚ್ಚು ಮಕ್ಕಳನ್ನು ಹೊಂದಿದ್ದು ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿದ್ದು ಹೆಮ್ಮೆಯ ವಿಷಯ ಎಂದರು.
ಶಾಲೆಯ ಕಾರ್ಯದರ್ಶಿ ನಾಗಸೇನ ತಾರೆ ಅವರು ಮಾತನಾಡಿ ನಮ್ಮ ಶಾಲೆಯಲ್ಲಿ ಅನುಭವಿ ಶಿಕ್ಷಕರನ್ನು ನೇಮಕ ಮಾಡಿಕೊಂಡು ಗುಣಮಟ್ಟದ ಶಿಕ್ಷಣದ ಜೋತೆಯಲ್ಲಿ ಪ್ರಾಯೋಗಿಕ ಜ್ಞಾನ ನೀಡಿ ಉತ್ತಮ ಪರೀಕ್ಷೆಗಳನ್ನು ನಡೆಸಿ ಪ್ರತಿ ವರ್ಗಕ್ಕೆ ಪ್ರಥಮ,ದ್ವಿತೀಯ, ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾದ ಮಕ್ಕಳಿಗೆ ಪ್ರತಿವರ್ಷ ಪ್ರಶಸ್ತಿ ಪತ್ರ ಹಾಗೂ ಪದಕಗಳನ್ನು ನೀಡಿ ಗೌರವಿಸುತ್ತೇವೆ, ನಮ್ಮ ಶಾಲೆಯಲ್ಲಿ ಶಿಕ್ಷಣ ತೋರಿಕೆ ಗಲ್ಲ ಮಕ್ಕಳ ಜ್ಞಾನಾರ್ಜನೆಗೆ ಪರಿಗಣಿಸಲು ಮಕ್ಕಳಿಗೆ ವಿವಿಧ ಕಾರ್ಯಕ್ರಮಗಳ ಆಯೋಜಿಸಿ ಅವರ ಪ್ರತಿಭೆ ಗುರುತಿಸಿ ಶಿಕ್ಷಣ ನೀಡಲಾಗುತ್ತದೆ, ಸಮಾಜದಲ್ಲಿ ಉತ್ತಮ ಪ್ರಜೆಯಾಗಬೇಕಾದರೆ ಬಾಲ್ಯದ ದಿನಗಳಲ್ಲಿ ಕಲಿತಿರುವ ಉತ್ತಮ ಸಂಸ್ಕಾರ, ಮೌಲ್ಯಗಳು ಮುಖ್ಯವಾಗುತ್ತದೆ. ಹಾಗಾಗಿ ಉತ್ತಮ ಮೌಲ್ಯಗಳನ್ನು ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪೆÇೀಷಕರು ಪ್ರೇರೇಪಿಸಬೇಕೆಂದರು. ಈ ಸಂದರ್ಭದಲ್ಲಿ ಶಾಲಾ ಪುಟಾಣಿಗಳು ಗ್ಯ್ರಾಜುವೇಶನ್ ಉಡುಗೆಯಲ್ಲಿ ಮಿಂಚಿದರು. ವಿದ್ಯಾರ್ಥಿಗಳಿಂದ ವಿವಿಧ ಮನರಂಜನಾ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಮುಖಂಡ ಅಶೋಕ ಶೇಂಬೆಳ್ಳಿ, ಪತ್ರಕರ್ತ ಅಂಬಾದಾಸ ನಳಗೆ ಮಾತನಾಡಿದರು. ಶಾಲಾ ಸಂಸ್ಥೆಯ ಅಧ್ಯಕ್ಷೆ ಲಕ್ಷ್ಮೀಬಾಯಿ ತಾರೆ, ಆನಂದ ಪಾಟೀಲ ನಿಟ್ಟೂರ, ಗೌತಮ ತಾರೆ, ದಿಲೀಪ್ ತಾರೆ, ಜ್ಯೋತಿ ನಾಗಸೇನ, ಮುಖ್ಯಶಿಕ್ಷಕ ದೀಪಕ ಕಾಂಬ್ಳೆ ಸೇರಿದಂತೆ ಶಾಲಾ ಸಿಬ್ಬಂದಿ, ವಿದ್ಯಾರ್ಥಿಬಳಗ, ಪೆÇೀಷಕರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
