ಉದಯವಾಹಿನಿ, ಬೀದರ: ಮನುಷ್ಯ ಸಂಘ ಜೀವಿ. ಸಹಕಾರ ಸಹಬಾಳ್ವೆ ಬದ್ಧತೆಯ ಜೀವನದಿಂದ ಸಂಘ, ಸಂಸ್ಥೆ ವಿಕಸಿತಗೊಳ್ಳಲು ಸಾಧ್ಯ ಎಂದು – ಗುರುನಾಥ ಜಾಂತಿಕರ ವಚನ ಸೌಹಾರ್ದ ಸಹಕಾರ ಸಂಘ ಉದ್ಘಾಟಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಮನ್ನಳ್ಳಿ ರಸ್ತೆಯಲ್ಲಿಯ ಪೋಲಾ ಕನ್‍ವೆನಶನ್ ಹಾಲ್ ನಲ್ಲಿ ವಚನ ಸೌಹಾರ್ದ ಸಹಕಾರ ಸಂಘ ಕಾರ್ಯಚಟುವಟಿಕೆ ಹಾಗೂ ಶೇರು ಪ್ರಮಾಣ ಪತ್ರ ವಿತರಣಾ ಸಮಾರಂಭವನ್ನು ಸಸಿಗೆ ನೀರೆರೆದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಬೆಂಗಳೂರು ನಿರ್ದೇಶಕರಾದ ಗುರುನಾಥ ಜಾಂತಿಕರ ಉದ್ಘಾಟಿಸಿ – ಹುಟ್ಟಿನಿಂದ ಸಾಯುವರೆಗೆ ಸಹಕಾರ ಅನಿವಾರ್ಯ. ನೂರಾರು ಜನರು ಒಗ್ಗಟಿನಿಂದಾಗಿ ಹತ್ತಾರು ಜನರಿಗೆ ಸಂದಿಗ್ಧತೆಯ ಕಾಲದಲ್ಲಿ ಸಹಕರಿಸುವುದೆ ಸೌಹಾರ್ದತೆಯ ಸಹಕಾರ ಎಂದು ನುಡಿದರು.
ಸಹಕಾರದ ಮೂಲ ಆಶಯ ಸಹಕಾರಿಗಳ ಅಭಿವೃದ್ಧಿ ಜೊತೆಗೆ ಸಮಾಜದ ಪರಿವರ್ತನೆಗೊಳಿಸುವಿಕೆ. ಶೋಷಣೆ ಮುಕ್ತ ಸಮಾಜ ನಿರ್ಮಾಣಗೊಂಡಾಗ ಬಸವಣ್ಣನವರ ಆಶಯ ಪೂರೈಸಿದಂತಾಗುತ್ತದೆ. ಶೇರುದಾರರು ಸಾಲಕ್ಕೆ ಸೀಮಿತಗೊಳ್ಳದೆ ಠೇವಣಿದಾರರಾಗಿ ಸಾಮಾಜಿಕ ಭದ್ರತೆ ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರು. ಜಿಲ್ಲೆಯಲ್ಲಿ 160 ಸಂಘಗಳು ನೋಂದಾವಣಿಯಾದರು 10 ಸಂಘಗಳು ಮಾತ್ರ ಕೆಲಸ ನಿರ್ವಹಿಸುತ್ತಿವೆ. ವಚನ ಸೌಹಾರ್ದ ಹೆಸರಿಗೆ ತಕ್ಕಂತೆ ನಿರ್ದೇಶಕರು ಕಾವಲುಗಾರರಾಗಿ ಶೇರುದಾರರಿಗೆ ಸಹಕರಿಸಬೇಕು. ಶೇರುದಾರರು ನಿಗದಿತ ಅವಧಿಯೊಳಗೆ ಬದ್ಧತೆಯಿಂದ ಪಡೆದ ಹಣ ಹಿಂತಿರುಗಿಸಿ ತಮ್ಮ ಕರ್ತವ್ಯ ನಿಭಾಯಿಸಬೇಕೆಂದು ಸಲಹೆ ನೀಡಿದರು.
ಡಿಸಿಸಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕರಾದ ವಿಠಲರೆಡ್ಡಿ ಯಡಮಲೆ ಮುಖ್ಯ ಅತಿಥಿಗಳಾಗಿ ಆಡಳಿತ ಮಂಡಳಿ ಸದಸ್ಯರು, ಶೇರುದಾರರು ಸಮನ್ವತೆಯಿಂದ ಕೆಲಸ ನಿರ್ವಹಿಸಬೇಕು. ಸಾಮರಸ್ಯದ ಜೀವನ ಸಂಘದ ಬಲವರ್ಧನೆಗೆ ಪ್ರೇರಣೆ. ನಮ್ಮ ಜಿಲ್ಲೆ ಸಹಕಾರ ಕ್ಷೇತ್ರದಲ್ಲಿಯ ಆರ್ಥಿಕ ಕ್ರಾಂತಿಗೆ ಹೆಸರುವಾಸಿ. ಸ್ವ-ಸಹಾಯ ಸಂಘಗಳು ಇಂದು ದೊಡ್ಡ ಕ್ರಾಂತಿ ಮಾಡಿವೆ. ಸಂಘವು ಸಬಲಗೊಂಡರೆ ಇಡಿ ಶೇರುದಾರರಿಗೆ ಅದರ ಗೌರವಸಲ್ಲುತ್ತದೆ. ನಮ್ಮ ಬ್ಯಾಂಕಿನಿಂದ ಬೇಕಾಗುವ ಸಹಕಾರ ನೀಡುತ್ತೇವೆಂದು ನುಡಿದರು.

Leave a Reply

Your email address will not be published. Required fields are marked *

error: Content is protected !!