ಉದಯವಾಹಿನಿ, ಮೈಸೂರು: ಮೈಸೂರಿನಲ್ಲಿ ಅತ್ಯುತ್ತಮ ಪ್ರಾಥಮಿಕ ಆರೋಗ್ಯ ಕೇಂದ್ರ ಬೇಕಾಗಿದೆ ಎಂದು ರಾಜವಂಶಸ್ಥ ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್ ಹೇಳಿದರು.
ನಗರದ ಖಾಸಗಿ ಹೋಟೆಲಿನಲ್ಲಿ ಬಿಜೆಪಿ ಮೈಸೂರು ನಗರ ಜಿಲ್ಲಾ ರಾಜ್ಯ ವೈದ್ಯಕೀಯ ಪ್ರಕೋಸ್ಟ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವೈದ್ಯರ ಸಭೆಯಲ್ಲಿ ಯದುವೀರ್ ಮಾತನಾಡಿದರು. ಮೈಸೂರು ಅರಸರು ಮಾಡಿರುವ ಕೆಲಸ ಎಲ್ಲರಿಗೂ ಗೊತ್ತಿರುವಂತದ್ದು, ಮೈಸೂರು ಸಂಸ್ಥಾನ ಆರೋಗ್ಯ ಕ್ಷೇತ್ರಕ್ಕೆ ಅತಿ ಹೆಚ್ಚು ಕೊಡುಗೆ ನೀಡಿದೆ ಬೆಂಗಳೂರಿನಲ್ಲಿ ಮಿಂಟೊ ಆಸ್ಪತ್ರೆ, ಮೈಸೂರಿನಲ್ಲಿ ಕೆಆರ್ ಆಸ್ಪತ್ರೆ ಹೀಗೆ ಹಲವಾರು ಆರೋಗ್ಯ ಕೇಂದ್ರಗಳ ಉದಾಹರಣೆಯನ್ನು ಅವರು ನೀಡಿದರು.
ಮೈಸೂರು ಸಂಸ್ಥಾನದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಪ್ರಪಂಚದಲ್ಲೇ ಮೈಸೂರು ಮೂರು ನಾಲ್ಕನೇ ಸ್ಥಾನದಲ್ಲಿತ್ತು, ಬ್ರಿಟನ್, ಜರ್ಮನಿಗಿಂತಲೂ ಉತ್ತಮವಾದ ಆರೋಗ್ಯ ಸೇವೆ ಮೈಸೂರಿನಲ್ಲಿ ಸಿಗುತ್ತಿತ್ತು ಬಹಳಷ್ಟು ಆರೋಗ್ಯ ಸೇವೆಗೆ ವಿದೇಶಗಳಿಂದ ಜನರು ಇಲ್ಲಿಗೆ ಬರುತ್ತಿದ್ದರು ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ಆರೋಗ್ಯವಂತ ಸಮಾಜಕ್ಕಾಗಿ ಹೆಚ್ಚು ಒತ್ತು ನೀಡಿದ್ದಾರೆ ಅದೇ ರೀತಿ ಅವರು ಯೋಗಕ್ಕೂ ಹೆಚ್ಚು ಪೆÇ್ರೀತ್ಸಾಹ ಕೊಟ್ಟಿದ್ದಾರೆ ಇದು ಮಾದರಿಯಾಗಿದ್ದು ನಾವು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ನೀಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಮೈಸೂರು ಮತ್ತು ಮೈಸೂರು-ಕೊಡಗು ಆರೋಗ್ಯ ಕ್ಷೇತ್ರದಲ್ಲಿ ಮಾದರಿಯಾಗಬೇಕು ಇಲ್ಲಿಗೆ ಅತ್ಯುತ್ತಮ ಹೆಲ್ತ್ ಕೇರ್ ಸೆಂಟರ್ ಆಗಲೇ ಬೇಕಿದೆ ಇದಕ್ಕೆ ನಿಮ್ಮೆಲ್ಲರ ಪೆÇ್ರೀತ್ಸಾಹ ಮತ್ತು ಸಹಕಾರ ಅಗತ್ಯ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ವೈದ್ಯರಲ್ಲಿ ಯದುವೀರ್ ಮನವಿ ಮಾಡಿದರು.
