ಉದಯವಾಹಿನಿ, ವಿಜಯಪುರ: ಬಸ್ ನ ಕ್ಯಾರಿಯರ್ ಮೇಲಿಟ್ಟಿದ್ದ ಕ್ಯಾರಿಬ್ಯಾಗ್ ಬದಲಾಗಿ 35 ಗ್ರಾಂ ಚಿನ್ನಾಭರಣ ಕಳೆದುಕೊಂಡ ಮಹಿಳೆಗೆ ಮರಳಿ ಚಿನ್ನಾಭರಣ ದೊರೆತ ಪ್ರಸಂಗ ನಡೆದಿದೆ.
ಅಫಜಲಪೂರದಿಂದ ಬದಾಮಿಗೆ ತೆರಳುತ್ತಿದ್ದ ಏಂ 25 ಈ 03 ಸರ್ಕಾರಿ ಬಸ್ ನಲ್ಲಿ ಈ ಘಟನೆ ನಡೆದಿದೆ.
ಬಸವನ ಬಾಗೇವಾಡಿಯಿಂದ ಬಾಗಲಕೋಟೆಗೆ ತೆರಳುತ್ತಿದ್ದ ಮಹಿಳೆ ಶಿಲ್ಪಾ ಎಂಬುವವರು ಚಿನ್ನಾಭರಣ ಇಟ್ಟಿದ್ದ ಕ್ಯಾರಿಬ್ಯಾಗ್ ಬದಲು ಆಗಿತ್ತು.
ಶಿಲ್ಪಾ ಬಾಗೇವಾಡಿ ಎಂಬುವವರು ಕ್ಯಾರಿ ಬ್ಯಾಗ್ ನಲ್ಲಿ ಚಿನ್ನಾಭರಣ ಇಟ್ಟು ಬಸ್ಸಿನ ಕ್ಯಾರಿಯರ್ ಮೇಲಿಲ್ಲಿಟ್ಟಿದ್ದರು. ಬಳಿಕ ಕುದರಿಸಾಲವಾಡಗಿ ಗ್ರಾಮದಲ್ಲಿ ಬಸ್ ಏರಿದ ಶಾರದಾ ಎಂಬ ಮಹಿಳೆಯೂ ಕ್ಯಾರಿಬ್ಯಾಗ್ ವೊಂದನ್ನು ಬಸ್ ಕ್ಯಾರಿಯರ್ ಮೇಲಿಟ್ಟಿದ್ದರು. ಶಾರದಾ ಕುದರಿಸಾಲವಾಡಗಿ ಗ್ರಾಮದಿಂದ ನಿಡಗುಂದಿಗೆ ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು.
ನಿಡಗುಂದಿಯಲ್ಲಿ ತಮ್ಮ ಕ್ಯಾರಿ ಬ್ಯಾಗ್ ಬದಲಾಗಿ ಶಿಲ್ಪಾ ಬಾಗೇವಾಡಿ ಅವರ ಚಿನ್ನಾಭರಣವಿದ್ದ ಕ್ಯಾರಿಬ್ಯಾಗ್ ತೆಗೆದುಕೊಂಡು ಶಾರದಾ ಬಸ್ಸಿನಿಂದ ಕೆಳಗಿಳಿದಿದ್ದರು.
