ಉದಯವಾಹಿನಿ, ಮೈಸೂರು: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ತೀರ್ಮಾನದ ವಿರುದ್ಧ ಶತದಿನ ಧರಣಿ ಸತ್ಯಾಗ್ರಹ ಆಚರಿಸಿದ ಹಿನ್ನೆಲೆಯಲ್ಲಿ, ಚಳುವಳಿಯನ್ನು ಜೀವಂತವಾಗಿ ಇರಬೇಕೆಂದು ತೀರ್ಮಾನದಂತೆ ವಾರಕ್ಕೊಂದು ದಿನ ಕಾವೇರಿ ಕ್ರಿಯಾಸಮಿತಿ ಧರಣಿ ಸತ್ಯಾಗ್ರಹದ ಉದ್ದೇಶದಿಂದ, ವಾರಕ್ಕೆ ಒಂದು ದಿನ ಕಾವೇರಿ ಕ್ರಿಯಾ ಸಮಿತಿಯ ಧರಣಿ ಸತ್ಯಾಗ್ರಹ ಹಾಗೂ ಸಹಿ ಸಂಗ್ರಹ ಕಾರ್ಯಕ್ರಮವನ್ನು ಎಂದಿನಂತೆ ಟೌನ್ ಹಾಲ್ ಮುಂಬಾಗ ಇಂದು ನಡೆಸಿತು.
ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಎಸ್. ಜಯ ಪ್ರಕಾಶ್ ಅಲ್ಲಿನ ಜಲಾಶಯಗಳಲ್ಲಿ ಅಷ್ಟೊಂದು ನೀರಿದ್ದರೂ ಕಾವೇರಿ ನ್ಯಾಯ ಮಂಡಳಿ ಗೆ ತಮಿಳುನಾಡು ಪಟ್ಟು ಹಿಡಿದಿರುವುದು ಅತ್ಯಂತ ನೋವಿನ ಸಂಗತಿ. ಈಗಾಗಲೇ ನಮ್ಮ ಕಾವೇರಿ ಕೊಳ್ಳಗಳಲ್ಲಿ ನೀರು ಬರಿದಾಗಿ, ಕುಡಿಯುವ ನೀರಿಗಾಗಿ ನಮ್ಮ ರಾಜ್ಯದಲ್ಲಿ ಹಿಂದೆಂದೂ ಕಾಣದಂತಹ ಹಾಹಾಕಾರ ಉಂಟಾಗಲಿದೆ. ವರುಣ ದೇವ ನಲ್ಲಿ ಅದಷ್ಟೂ ಬೇಗ ಮಳೆ ಸುರಿಸಲಿ ಎಂದು ಪ್ರಾರ್ಥಿಸೋಣ ಎಂದರು.
ಈ ಕೂಡಲೇ ರಾಷ್ಟ್ರಪತಿಗಳು ಮಧ್ಯಸ್ಥಿಕೆ ವಹಿಸಿ ಈ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು. ನಮ್ಮ ರಾಜ್ಯಕ್ಕೆ ಕಾವೇರಿ ನೀರಿನ ವಿಚಾರವಾಗಿ ಶಾಶ್ವತವಾದ ಪರಿಹಾರವನ್ನು ನೀಡಬೇಕು ಅಲ್ಲಿಯ ತನಕ ನಮ್ಮ ಹೋರಾಟ ನಡೆಯಲಿದೆ ಎಂದರು.
ಇಂದಿನ ಸಹಿ ಸಂಗ್ರಹದಲ್ಲಿ ಮೂಗೂರು ನಂಜುಂಡಸ್ವಾಮಿ, ಎಂ.ಜೆ ಸುರೇಶ್ ಗೌಡ , ತೇಜೇಶ್ ಲೋಕೇಶ್ ಗೌಡ, ಮಂಜುಳಾ, ಪ್ರಭುಶಂಕರ, ವರಕೂಡು ಕೃಷ್ಣೇಗೌಡ, ರಮೇಶ್ , ನೇಹಾ, ಸಿಂದುವಳ್ಳಿ ಶಿವಕುಮಾರ್, ಆಟೋ ಮಹಾದೇವ, ಅಶೋಕ್, ಪುಷ್ಪವತಿ ,ನಾಗರಾಜ್, ಕೃಷ್ಣಪ್ಪ, ಹನುಮಂತಯ್ಯ ,ಪ್ರಭಾಕರ, ಬಾಲು, ರವೀಶ್, ಭಾಗ್ಯಮ್ಮ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
