ಉದಯವಾಹಿನಿ, ಬೆಂಗಳೂರು: ಕಾಫಿ ತಯಾರಿಕೆಯಲ್ಲಿ ಪ್ರಮುಖ ಅಂಶವಾಗಿರುವ ರೋಬಸ್ಟಾ ಕಾಫಿ ಬೀಜಗಳ ಬೆಲೆ ಅಭೂತಪೂರ್ವ ಏರಿಕೆ ಕಂಡಿದೆ, ಪ್ರತಿ ೫೦ ಕೆಜಿ ಚೀಲಕ್ಕೆ ೧೦,೦೮೦ ರೂ.ಗೆ ತಲುಪಿದೆ. ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಪಶ್ಚಿಮ ಘಟ್ಟಗಳ ಪ್ರದೇಶದ ಸುಂದರವಾದ ಬೆಟ್ಟಗಳಲ್ಲಿ ಬ್ರಿಟಿಷರು ಕಾಫಿ ಎಸ್ಟೇಟ್‌ಗಳನ್ನು ಪ್ರಾರಂಭಿಸಿದ ನಂತರ ಬೆಲೆಗಳು ಗಗನ ಮುಖಿಯಾಗಿರುವುದು ಇದೇ ಮೊದಲು ಎಂದು ಹೇಳಲಾಗಿದೆ
ಅರೇಬಿಕಾಕ್ಕಿಂತ ಭಿನ್ನವಾಗಿ,ಐಷಾರಾಮಿ ಕೆನೆ ಪದರವನ್ನು ಉತ್ಪಾದಿಸುವ ಸಾಮರ್ಥ್ಯ ಕ್ಕೆ ರೊಬೊಸ್ಟೋ ಕಾಫಿ ಹೆಸರುವಾಸಿಯಾಗಿದೆ, ರೋಬಸ್ಟಾ ಸುಮಾರು ೧೫ ವರ್ಷಗಳಿಂದ ೫೦ ಕೆಜಿ ಚೀಲಕ್ಕೆ ೨,೫೦೦ ರಿಂದ ೩,೫೦೦ ರವರೆಗೆ ಇತ್ತು ಇದೀಗ ಅದರ ಬೆಲೆ ಏರಿಕೆಯಾಗಿದೆ
ಈ ಮೂಲಕ ಕಾಫಿ ಬೆಲೆಯಲ್ಲಿ ಗಣನೀಯವಾಗಿ ಏರಿಕೆ ಕಂಡಿರುವುದು ಕಾಫಿ ಬೆಳೆಗಾರರಲ್ಲಿ ಮಂದಹಾಸ ಮೂಡಿಸಿದೆ, ಸಣ್ಣ ಹಿಡುವಳಿ ಹೊಂದಿರುವ ಬೆಳೆಗಾರರಲ್ಲೂ ಸಂತಸ ಮನೆ ಮಾಡಿದೆ.
ಅರೇಬಿಕಾಕ್ಕೆ ಹೋಲಿಸಿದರೆ ಕಡಿಮೆ ಇನ್‌ಪುಟ್ ವೆಚ್ಚದ ಕಾರಣ ರೋಬಸ್ಟಾ ಕಾಫಿಗೆ ಬೆಲೆ ಹೆಚ್ಚಳವಾಗಿದೆ, ಅನಿಯಮಿತ ಮಳೆ, ಕಾಡು ಪ್ರಾಣಿಗಳಿಂದ ಉಂಟಾದ ಬೆಳೆ ಹಾನಿ ಮತ್ತು ಹೆಚ್ಚುತ್ತಿರುವ ಇನ್ಪುಟ್ ಮತ್ತು ಕೂಲಿ ವೆಚ್ಚಗಳಂತಹ ಸವಾಲುಗಳಿಂದ ಉಂಟಾಗುವ ನಷ್ಟ ಸೇರಿದಂತೆ ವಿವಿಧ ಕಾರಣದಿಂದ ರೊಬೋಸ್ಟಾ ಕಾಫಿ ಬೆಲೆಯಲ್ಲಿ ಗಣನೀಯ ಏರಿಕೆ ಕಂಡಿದೆ
ಕಳೆದ ವರ್ಷದವರೆಗೆ,೫೦ ಕೆಜಿ ಚೀಲಕ್ಕೆ ೪,೫೦೦ ರೂ.ಗಳನ್ನು ಪಡೆಯುತ್ತಿದ್ದೆವು, ಈ ವರ್ಷದ ಜನವರಿ ವೇಳೆಗೆ, ಬೆಲೆಗಳು ೭,೦೦೦ ರಿಂದ ೮,೦೦೦ ರೂ.ಗೆ ತಲುಪಿತು. ಇದೀಗ ಅದರ ಬೆಲೆ ೧೦ ಸಾವಿರ ಗಡಿ ದಾಟಿದೆ ಎಂದು ಚಿಕ್ಕಮಗಳೂರಿನ ಕಾಫಿ ತೋಟಗಾರ ಸಾಲ್ಡ್ ಜಿ ನಿತಿನ್ ಹೇಳಿದ್ದಾರೆ.
