ಉದಯವಾಹಿನಿ, ಯಾದಗಿರಿ : ಭಾರತ ಚುನಾವಣಾ ಆಯೋಗವು ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ಘೋಷಿಸಿ, 2024ರ ಮಾರ್ಚ್ 16 ರಿಂದ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಚುನಾವಣೆ ಶಾಂತಿಯುತವಾಗಿ ನಿಷ್ಪಕ್ಷಪಾತವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮವಹಿಸಲು ಜಿಲ್ಲೆಯ ವ್ಯಾಪ್ತಿಯಲ್ಲಿ ನಕಲಿ ಮದ್ಯ, ಅಕ್ರಮ ಮದ್ಯ, ಕಲಬೆರಕೆ ಸೇಂದಿ, ಕಳ್ಳಭಟ್ಟಿ ಸಾರಾಯಿ ಹಾಗೂ ಇತರೆ ಅಬಕಾರಿ ಅಕ್ರಮ ಪದಾರ್ಥಗಳ ತಯಾರಿಕೆ ಸಾಗಾಣಿಕೆ ಸಂಗ್ರಹಣೆ ಹಾಗೂ ಮಾರಾಟಗಳಂತಹ ಅಕ್ರಮ ಚಟುವಟಿಕೆಗಳು ನಡೆಯದಂತೆ ಚುನಾವಣಾ ಆಯೋಗದ ನಿರ್ದೇಶನದಂತೆ ಕ್ರಮ ಕೈಗೊಂಡಿರುವ ಮಾಹಿತಿ ಸಲ್ಲಿಸಲಾಗಿದೆ ಎಂದು ಯಾದಗಿರಿ ಅಬಕಾರಿ ಉಪ ಆಯುಕ್ತೆ ಶಾರದಾ ಸಿ.ಕೋಲಕಾರ ಅವರು ತಿಳಿಸಿದ್ದಾರೆ.

ಪ್ರಕರಣ ಸಂ.1, 2024ರ ಏಪ್ರಿಲ್ 17 ರಂದು ಅಬಕಾರಿ ಜಂಟಿ ಆಯುಕ್ತರು ಕಲಬುರಗಿ ವಿಭಾಗ, ಕಲಬುರಗಿ ಹಾಗೂ ಅಬಕಾರಿ ಉಪ ಆಯುಕ್ತರು, ಯಾದಗಿರಿ ಅವರು ನಿರ್ದೇಶನ ಹಾಗೂ ಶ್ರೀ ಆನಂದ ಉಕ್ಕಲಿ ಅಬಕಾರಿ ಉಪ ಅಧೀಕ್ಷಕರು ಉಪ ವಿಭಾಗ ಶಹಾಪೂರ ಅವರು ಮಾರ್ಗದರ್ಶನದಲ್ಲಿ ಖಚಿತ ಭಾತ್ಮಿಯ ಮೇರೆಗೆ ಶ್ರೀ ವಿಜಯಕುಮಾರ ಹೀರೆಮಠ, ಅಬಕಾರಿ ನಿರೀಕ್ಷಕರು, ಶ್ರೀ ಅನಿಲ್ ಎಮ್ ಪತ್ತಾರ್ ಹಾಗೂ ಶ್ರೀ ಮಹೇಶ ಚೌಧರಿ, ಅಬಕಾರಿ ಉಪ ನಿರೀಕ್ಷಕರು, ಶಹಾಪುರ ವಲಯ ಮತ್ತು ಅಬಕಾರಿ ಮುಖ್ಯ ಪೇದೆಯಾದ, ಶ್ರೀ ಮಹ್ಮದ ಸುಭಾನಿ, ಶ್ರೀ ನಾಗರಾಜ, ಅಬಕಾರಿ ಪೇದೆಯಾದ ಶ್ರೀ ಬಸ್ಸಪ್ಪ ಚಲುವಾದಿ ಕೊಂಗAಡಿ ವಾಹನ ಚಾಲಕರಾದ ಶ್ರೀಗೋಪಾಲ ರೆಡ್ಡಿ ಮತ್ತು ಗೃಹ ರಕ್ಷಕ ಸಿಬ್ಬಂದಿಯಾದ ಸೂರ್ಯಕಾಂತ, ಇಮಾಮುದ್ದೀನ್, ಸಂತೋಷ್ ಸಿಬ್ಬಂದಿಗಳೊAದಿಗೆ ಕೂಡಿಕೊಂಡು ಶಹಾಪೂರ ಪಟ್ಟಣದ ಬೀಗುಡಿ ಸರ್ಕಲ್ ಹತ್ತಿರದ ಮುಂಭಾಗದ ರಸ್ತೆಯಲ್ಲಿ ರಸ್ತೆಗಾವಲು ಮಾಡುತ್ತಿದ್ದಾಗ ಹೀರೊ ಸ್ಪೆ÷್ಲಂಟರ್ ಪ್ಲಸ್ ದ್ವಿ-ಚಕ್ರ ವಾಹನ ಸಂಖ್ಯೆ.ಕೆಎ-32 EY-9275ನೇದ್ದರಲ್ಲಿ ಅಕ್ರಮವಾಗಿ 8.640 ಲೀಟರ್ ಮದ್ಯವನ್ನು ಮಾರಾಟದ ಉದ್ದೇಶದಿಂದ ಸಾಗಾಟ ಮಾಡುತ್ತಿರುವುದು ಕಂಡುಬAದಿರುತ್ತದೆ. ಪ್ರಯುಕ್ತ, ಸದರಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಸರ್ಕಾರಿ ತರ್ಫೆ ಪಿರ್ಯದಿಯಾಗಿ ಗುನ್ನೆ ದಾಖಲಿಸಿಕೊಂಡ ಪ್ರಯುಕ್ತ ಈ ಪ್ರಥಮ ವರ್ತಮಾನ ವರದಿಯನ್ನು ತಯಾರಿಸಿ ಮಾನ್ಯ ಘನ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!