ಉದಯವಾಹಿನಿ, ಚಿಂಚೋಳಿ : ತಾಲೂಕಿನ ಹಸರಗುಂಡಗಿ ಗ್ರಾಮದ ಹೊಲವೊಂದರಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿರುವ ಬಗ್ಗೆ ಬಂದ ನಿಖರ ಮಾಹಿತಿಯ ಮೇರೆಗೆ ಆಹಾರ ನಿರೀಕ್ಷಕ ರಾಜು ರಾಮದಾಸ ಮತ್ತು ಪೊಲೀಸ ಸಿಬ್ಬಂದಿಗಳಾದ ರಮೇಶ ಮತ್ತು ಅಮೀರ ಅಲಿ ಅವರನ್ನೊಳಗೊಂಡ ತಂಡ ನಿನ್ನೆ ಏ.18 ರಂದು ದಾಳಿ ಮಾಡಿ 5.88 ಲಕ್ಷ ರೂ. ಮೌಲ್ಯದ ಪಡಿತರ ಅಕ್ಕಿಯನ್ನು ಜಪ್ತಿಮಾಡಿದೆ.
ಹಸರಗುಂಡಗಿ ಗ್ರಾಮದ ಶರಣ ತಂದೆ ಶಂಕ್ರಪ್ಪ ಹಿರಾಪೂರ ಮತ್ತು ವಿದ್ಯಾಸಾಗರ ತಂದೆ ಶಂಕರಪ್ಪ ಹಿರಾಪೂರ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಬೆಳೆದ ಶ್ರೀಗಂಧ ಗಿಡಗಳ ನಡುವೆ ಅಕ್ರಮವಾಗಿ ಸಂಗ್ರಹಿಸಿಟ್ಟಿರುವ 168 ಕ್ವಿಂಟಾಲ ಪಡಿತರ 336 ಅಕ್ಕಿ ಚೀಲಗಳನ್ನು ಜಪ್ತಿಮಾಡಿದ ಅಧಿಕಾರಿಗಳು,
ಈ ಕುರಿತು ಚಿಂಚೋಳಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದಾಳಿಯ ವೇಳೆ ಆರೋಪಿಗಳಿಬ್ಬರು ಪರಾರಿಯಾಗಿದ್ದು, ಅವರ ಬಂಧನಕ್ಕಾಗಿ ಪೊಲೀಸರು ಜಾಲ ಬಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!