ಉದಯವಾಹಿನಿ, ಗೌರಿಬಿದನೂರು: ಕಾರಿನ ಗಾಜು ಒಡೆದು 10 ಲಕ್ಷ ಹಣ ದೋಚಿಕೊಂಡು ಪರಾರಿಯಾಗಿರುವ ಘಟನೆ ತಾಲ್ಲೂಕು ಕಚೇರಿ ಸಮೀಪ ನಡೆದಿದೆ. ಕೊರಟಗೆರೆ ತಾಲೂಕಿನ ತೊಗರಿಘಟ್ಟದ ವಾಸಿ ನಾರಾಯಣಪ್ಪ (72) ಹಣ ಕಳೆದುಕೊಂಡ ವ್ಯಕ್ತಿ.
ಇತ್ತೀಚೆಗೆ ಗೌರಿಬಿದನೂರು ತಾಲೂಕಿನ ಕಲ್ಲೂಡಿ ಗ್ರಾಮದ ಬಳಿ ಜಮೀನು ಖರೀದಿ ಮಾಡಿ ಅದನ್ನು ಉಪನೋಂದಣಿ ಕಚೇರಿಯಲ್ಲಿ ತಮ್ಮ ಹೆಸರಿಗೆ ನೋಂದಾಯಿಸಿಕೊಳ್ಳಲು ಬಂದಿದ್ದಾರೆ.
ಜಮೀನು ಮಾಲೀಕರಿಗೆ ಹಣ ಕೊಡಲು ಕಾರಿನ ಹಿಂಬದಿಯಲ್ಲಿ 35 ಲಕ್ಷ ಬ್ಯಾಗ್‌ವೊಂದರಲ್ಲಿ ಇಟ್ಟಿದ್ದು, ಕಾರನ್ನು ತಾಲೂಕು ಕಚೇರಿ ಮುಂದೆ ಇರುವ ಹೊಟೇಲ್‌ ಬಳಿ ನಿಲ್ಲಿಸಿ ನೋಂದಣಿ ಕಚೇರಿಗೆ ಹೋಗಿ ಬರುವಷ್ಟರಲ್ಲಿ ಯಾರೋ ಹೊಂಚು ಹಾಕಿ ಕಾರಿನ ಹಿಂಬದಿಯ ಗಾಜು ಒಡೆದು 10 ಲಕ್ಷ ರೂ.ಗಳ ಬಂಡಲ್‌ ಮಾತ್ರ ತೆಗೆದುಕೊಂಡು ಪರಾರಿಯಾಗಿದ್ದಾರೆ.
ಈ ಸಂಬಂಧ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ನಾರಾಯಣಪ್ಪ ದೂರು ದಾಖಲಿಸಿದ್ದು, ಸ್ಥಳಕ್ಕೆ ಎಸ್‌ಐಗಳಾದ ರಮೇಶ್‌ ಗುಗ್ಗರಿ, ಗೋಪಾಲ್‌ ಮತ್ತು ಸಿಬ್ಬಂದಿ ಬಂದು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!