ಉದಯವಾಹಿನಿ, ಬೆಂಗಳೂರು: ಇನ್ನು ಮುಂದೆ ನೀರಾವರಿ ಪ್ರದೇಶ ಸೇರಿದಂತೆ ರಾಜ್ಯಾದ್ಯಂತ ಎಲ್ಲಾ ಕಡೆ ಕೃಷಿ ಹೊಂಡಗಳನ್ನು ತೆರೆಯಲಾಗುವುದು ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಅವರು ವಿಧಾನಪರಿಷತ್ನಲ್ಲಿ ತಿಳಿಸಿದರು. ಬೆಂಗಳೂರು ಸದಸ್ಯ ಕೇಶವಪ್ರಸಾದ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಈವರೆಗೂ ಕೃಷಿ ಹೊಂಡಗಳನ್ನು ನೀರಾವರಿ ಪ್ರದೇಶ ಹೊರತುಪಡಿಸಿ ಬೇರೆ ಬೇರೆ ಕಡೆ ತೆರೆಯಲಾಗುತ್ತಿತ್ತು. ಇನ್ನು ಮುಂದೆ ನೀರಾವರಿ ಪ್ರದೇಶದಲ್ಲೂ ತೆರೆಯಲು ಸಂಬಂಧಪಟ್ಟ ಅಽಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಈ ಮೊದಲು 106 ತಾಲ್ಲೂಕುಗಳಲ್ಲಿ ಮಾತ್ರ ಕೃಷಿ ಹೊಂಡಗಳನ್ನು ತೆರೆಯಲು ಅವಕಾಶವಿತ್ತು. ಇದು ಎಲ್ಲ ರೈತರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕಾಗಿ ನೀರಾವರಿ ಪ್ರದೇಶಗಳಲ್ಲೂ ತೆರೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು. ಹೊಸದಾಗಿ ಕೃಷಿ ಹೊಂಡಗಳನ್ನು ತೆರೆಯುವವರು ಕಡ್ಡಾಯವಾಗಿ ತಂತಿಬೇಲಿಗಳನ್ನು ಅಳವಡಿಸಬೇಕು. ಅಲ್ಲದೆ ಅಲ್ಲಿ ಬೋರ್ಡ್ಗಳನ್ನು ಹಾಕಬೇಕು. ಸದ್ಯದಲ್ಲೇ ಇದಕ್ಕಾಗಿ ಹೊಸದೊಂದು ಆ್ಯಪ್ ತೆರೆಯುವುದಾಗಿ ವಿವರಿಸಿದರು.
