ಉದಯವಾಹಿನಿ, ನವದೆಹಲಿ: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಕರ್ನಾಟಕದ ಇಬ್ಬರು ಮೃತಪಟ್ಟಿದ್ದು, ಮತ್ತಿಬ್ಬರು ನಾಪತ್ತೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ ಅಗತ್ಯವಿರುವ ಎಲ್ಲಾ ಬೆಂಬಲ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ದುರ್ಘಟನೆಯಲ್ಲಿ ಮೃತರ ಆತಕ್ಕೆ ಶಾಂತಿ ಕೋರಿದ್ದಾರೆ. ಈವರೆಗಿನ ಮಾಹಿತಿ ಪ್ರಕಾರ, ಕರ್ನಾಟಕದ ಇಬ್ಬರ ಜೀವಹಾನಿಯಾಗಿದೆ. ಇಂದು ಬೆಳಿಗ್ಗೆ ತಾವು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರೊಂದಿಗೆ ದೂರವಾಣಿಯಲ್ಲಿ ಚರ್ಚೆ ನಡೆಸಿದ್ದು, ಕರ್ನಾಟಕ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದ್ದೇವೆ ಎಂದರು.
ರಾಜ್ಯದ ಇಬ್ಬರು ಐಎಎಸ್‌‍ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರನ್ನು ನಿಯೋಜಿಸಲಾಗಿದ್ದು, ಕರ್ನಾಟಕದವರ ರಕ್ಷಣೆ ಹಾಗೂ ಪುನರ್‌ವಸತಿಗೆ ಸೂಚಿಸಲಾಗಿದೆ. ವೀಲಿಂಗ್ ಮಾಡಿದ ಅಪ್ರಾಪ್ತ, ಪೋಷಕರ ವಿರುದ್ಧ ಎಫ್‌ಐಆರ್
1 ಸಾವಿರ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲು, 5.61 ಲಕ್ಷ ದಂಡ ವಸೂಲಿ
ಕೇರಳಕ್ಕೆ ಎಲ್ಲಾ ಅಗತ್ಯ ನೆರವಿನ ಭರವಸೆ ನೀಡಿದ ಸಿಎಂ ಸಿದ್ದರಾಮಯ್ಯ ಕರುಳಿನಲ್ಲಿ ರಂಧ್ರ ಉಂಟಾಗಿದ್ದ ಬಾಲಕನಿಗೆ ಯಶಸ್ವಿ ಸಂಕೀರ್ಣ ಶಸ್ತ್ರಚಿಕಿತ್ಸೆ
ವಯನಾಡಿಗೆ ಸಚಿವ ಸಂತೋಷ್‌ ಲಾಡ್‌ ಭೇಟಿ ಭೂಕುಸಿತ ದೊಡ್ಡ ಆಘಾತವನ್ನು ಉಂಟುಮಾಡಿದೆ ಎಂದು ಹೇಳಿದರು.ರಕ್ಷಣಾ ಕಾರ್ಯಾಚರಣೆಗೆ ಕರ್ನಾಟಕ ಎಲ್ಲಾ ರೀತಿಯ ಸಹಾಯ ನೀಡಲಿದ್ದು, ಯಾವುದೇ ಸಹಾಯ ಕೇಳಿದರೂ ನಾವು ತಯಾರಿದ್ದೇವೆ ಎಂದರು.

Leave a Reply

Your email address will not be published. Required fields are marked *

error: Content is protected !!