ಉದಯವಾಹಿನಿ, ಬೆಂಗಳೂರು: ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರ ಕುಟುಂಬ ಸದಸ್ಯರ ಮೇಲೆ ಬಂದಿ ರುವ ಆರೋಪಕ್ಕೆ ಸಂಬಂಧಿಸಿದಂತೆ ಮಾತ್ರ ಆತುರದಲ್ಲಿ ಎಸ್‌‍ಐಟಿ ರಚನೆ ಮಾಡಿ, ನೋಟೀಸ್‌‍ ನೀಡಿ, ವಿಚಾರಣೆ ಮಾಡಿ, ನ್ಯಾಯಾಂಗ ಬಂಧನಕ್ಕೂ ಕಳಿಸುತ್ತೀರಿ.
ಆದರೆ ಅದೇ ಆಸಕ್ತಿ ವಾಲೀಕಿ ನಿಗಮದ ಹಗರಣದಲ್ಲಿ ಯಾಕೆ ತೋರಿಸುತ್ತಿಲ್ಲ? ಇದು ಯಾವ ಸೀಮೆ ನ್ಯಾಯ ಸಿದ್ದರಾಮಯ್ಯನವರೇ? ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಆಶೋಕ್‌ ಪ್ರಶ್ನೆ ಮಾಡಿದ್ದಾರೆ.
ಈ ಕುರಿತು ಸಿಎಂ ಸಿದ್ದರಾಮಯ್ಯನವರಿಗೆ ತಮ ಸಾಮಾಜಿಕ ಜಾಲತಾಣ ಎಕ್‌್ಸನಲ್ಲಿ ಸರಣಿ ಪ್ರಶ್ನೆಗಳನ್ನು ಮುಂದಿಟ್ಟಿರುವ ಆಶೋಕ್‌ ಅವರು, ಎಸ್‌‍ಐಟಿ ರಚನೆಯಾಗಿದ್ದು 31.05.2024 ರಂದು. ಆದರೆ ಎಸ್‌‍ಐಟಿ ರಚನೆಯಾಗಿ 40 ದಿನ ಕಳೆದರೂ ಮಾಜಿ ಸಚಿವ ನಾಗೇಂದ್ರ ಅವರನ್ನಾಗಲಿ, ಶಾಸಕ ಬಸವರಾಜ ದದ್ದಲ್‌ ಅವರನ್ನಾಗಲಿ ವಿಚಾರಣೆ ಮಾಡಲಿಲ್ಲ.ವಿಚಾರಣೆ ಹೋಗಲಿ ಒಂದು ನೋಟಿಸ್‌‍ ಕೂಡಾ ಕೊಡಲಿಲ್ಲ. ಅಂದಮೇಲೆ ನಿಮಗೆ ಸತ್ಯ ಸಂಗತಿ ಹೊರಬರುವುದು ಬೇಕಾಗಿಯೇ ಇರಲಿಲ್ಲ. ಎಸ್‌‍ಐಟಿ ರಚಿಸಿದ್ದೇ ಈ ಹಗರಣ ಮುಚ್ಚಿಹಾಕಲು ಅಲ್ಲವೇ ಸಿದ್ದರಾಮಯ್ಯನವರೇ? ಎಂದು ಕಿಡಿಕಾರಿದ್ದಾರೆ.
ಎಸ್‌‍ಐಟಿ ನಿಮ ಕೈಗೊಂಬೆ ಎನ್ನುವುದಕ್ಕೆ ಪರಶುರಾಮ್‌ ಮತ್ತು ಪದನಾಭ್‌ ಅವರ ನಡುವೆ ನಡೆದಿರುವ ಫೋನ್ ಸಂಭಾಷಣೆಯೇ ಸಾಕ್ಷಿ. ಸಿಬಿಐ, ಇಡಿ ಆದರೆ ನಮಗೆ ಜೈಲೇ ಗತಿ, ಎಸ್‌‍ಐಟಿ ಆದರೆ ನೋಡಿಕೊಳ್ಳಬಹುದು ಎಂದು ಪದನಾಭ್‌ ಹೇಳಿರುವುದು ಸತ್ಯವಲ್ಲವೇ ಸಿದ್ದರಾಮಯ್ಯನವರೇ? ನಿಮ ಎಸ್‌‍ಐಟಿ ಎಷ್ಟು ನಿಷ್ಪಕ್ಷಪಾತಿ ಎಂದು ತಿಳಿಯಲು ಇದಕ್ಕಿಂತ ಪುರಾವೆ ಬೇಕೆ? ಎಂದು ವ್ಯಂಗ್ಯವಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!