ಉದಯವಾಹಿನಿ, ಬೆಂಗಳೂರು: ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ವತಿಯಿಂದ ಪ್ರತಿಭಾ ಪುರಸ್ಕಾರ-೨೦೨೪ ರ ಎಸ್.ಎಸ.ಎಲ್.ಸಿ ಮತ್ತು ಪಿಯುಸಿ ಶಿಕ್ಷಣದಲ್ಲಿ ಶೇಕಡ ೯೦% ಹೆಚ್ಚು ಅಂಕಗಳನ್ನು ಪಡೆದ ಕುರುಬ ಸಮಾಜದ ಸುಮಾರು ೮೫೦ ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಪ್ರೊತ್ಸಾಹ ಧನ ನೀಡಿ ಸನ್ಮಾನಿಸಲಾಯಿತು.
ಕಾಗಿನೆಲೆ ಮಹಸಂಸ್ಥಾನ ಕನಕ ಗುರುಪೀಠದ ಶಾಖಾ ಮಠಗಳ ಗುರುಗಳಾದ ಶ್ರೀ ಈಶ್ವರಾನಂದಪುರು ಸ್ವಾಮೀಜಿ, ಶ್ರೀ ಶಿವಾನಂದಪುರಿ ಸ್ವಾಮೀಜಿ, ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿ ಅವರುಗಳು ದಿವ್ಯ ಸಾನಿಧ್ಯ ವಹಿಸಿದ್ದರು. ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ಎಂ.ರೇವಣ್ಣ , ಬಿಬಿಎಂಪಿ ಮಾಜಿ ಮೇಯರ್ ಎನ್. ಶಾಂತಕುಮಾರಿ ಸೇರಿದಂತೆ ಸಮಾಜದ ಅನೇಕ ಗಣ್ಯರು ಇದೆ ವೇಳೆ ಉಪಸ್ಥಿತರಿದ್ದರು.
