ಉದಯವಾಹಿನಿ, ದಾವಣಗೆರೆ: ಮಹಾನಗರ ಪಾಲಿಕೆ ಪಕ್ಕದಲ್ಲಿರುವ, ರೈಲ್ವೆ ಸ್ಟೇಷನ್ ಎದುರುಗಡೆ ಇರುವ ಬಸ್ ನಿಲ್ದಾಣದಲ್ಲಿ ಕುಳಿತುಕೊಳ್ಳಲು ಅಸಾಧ್ಯವಾಗದಷ್ಟು ಗಲೀಜು ತುಂಬಿದ್ದು, ಅವುಗಳ ಸ್ವಚ್ಛತೆ ಬಗ್ಗೆ ಪಾಲಿಕೆ ಸ್ವಲ್ಪವೂ ಯೋಚನೆ ಮಾಡುತ್ತಿಲ್ಲ ಎಂಬುದು ಎದ್ದು ಕಾಣುತ್ತದೆ. ದೂರ ದೂರದ ಊರುಗಳಿಂದ ಬಂದಂತ ಪ್ರಯಾಣಿಕರು, ಈ ಬಸ್ ನಿಲ್ದಾಣದಲ್ಲಿ ಕುಳಿತು, ವಿಶ್ರಮಿಸಿ, ಬೇರೆ ಊರುಗಳಿಗೆ ತೆರಳಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಸ್ ನಿಲ್ದಾಣದಲ್ಲಿ ಕುರ್ಚಿಗಳ ಕೆಳಗೆ, ಹಿಂಭಾಗದಲ್ಲಿ, ಅಕ್ಕಪಕ್ಕದಲ್ಲಿ, ಗಲೀಜು ತುಂಬಿದ್ದು, ವಾಸನೆಯುಕ್ತವಾಗಿದ್ದು, ಪ್ರಯಾಣಿಕರು ಕುಳಿತುಕೊಳ್ಳಲಾರದೇ ಮೂಗು ಮುಚ್ಚಿಕೊಳ್ಳುವಂತಾಗಿದೆ. ಕುರ್ಚಿಯ ಪಕ್ಕದಲ್ಲಿರುವ ಎರಡು ಕಸದ ಬುಟ್ಟಿಗಳನ್ನು ಬಹಳ ದಿನಗಳಿಂದ ಸ್ವಚ್ಛತೆ ಮಾಡಿಲ್ಲ ಎಂಬುದು, ಅದು ತುಂಬಿ ತುಳುಕುತ್ತಿರುವ ದೃಶ್ಯದಲ್ಲಿ ಕಂಡುಹಿಡಿಯಬಹುದು. ಹಾಗಾಗಿ ದಾವಣಗೆರೆ ನಗರಸಭೆಯವರು ಆದಷ್ಟು ಶೀಘ್ರವಾಗಿ, ರೈಲ್ವೆ ಸ್ಟೇಷನ್‌ನ ಎದುರುಗಡೆ ಇರುವಂತಹ ಎಲ್ಲಾ ಬಸ್ ಸ್ಟಾ÷್ಯಂಡ್‌ಗಳನ್ನು, ನೀರಿನಿಂದ, ಫಿನೈಲ್ ದಿಂದ ಸ್ವಚ್ಛಗೊಳಿಸಿ, ಬಂದು ಕುಳಿತುಕೊಳ್ಳುವರಿಗೆ ಒಂದು ಅಹ್ಲಾಧಕರ ವಾತಾವರಣವನ್ನ ನಿರ್ಮಾಣ ಮಾಡಿಕೊಟ್ಟರೆ ಮಹಾದೂಪಕರವಾಗುತ್ತದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷರಾದ ಡಾ. ಎಚ್. ಕೆ. ಎಸ್. ಸ್ವಾಮಿಯವರು ವಿನಂತಿಸಿಕೊಂಡಿದ್ದಾರೆ.

ಬೇರೆ ಊರುಗಳಿಂದ ದಾವಣಗೆರೆ ಬರುವ ಪ್ರಯಾಣಿಕರು ದಾವಣಗೆರೆಯ ಬಗ್ಗೆ ಒಂದು ಒಳ್ಳೆಯ ಅಭಿಪ್ರಾಯವನ್ನು ರೂಡಿಸಿಕೊಂಡು ಊರಿಗೆ ಬಂದಿರುತ್ತಾರೆ. ಸ್ಮಾರ್ಟ್ ಸಿಟಿ ಅಂದರೇನು?, ಸ್ವಚ್ಛತೆ ಎಂದರೇನು?, ಅದರ ಬಗ್ಗೆ ಅನುಭವ ತೆಗೆದುಕೊಂಡು ತಮ್ಮ ಊರುಗಳಿಗೆ ಹಿಂತಿರುಗಿ ಅದೇ ಸ್ವಚ್ಛತೆಯನ್ನ ತಮ್ಮ ಊರುಗಳಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಮಾದರಿ ನಗರವಾಗಬೇಕಾಗಿದ್ದ ದಾವಣಗೆರೆ ಬಸ್ ನಿಲ್ದಾಣದ ಅಕ್ಕಪಕ್ಕದಲ್ಲಿ ಸ್ವಚ್ಛತೆ ಇಲ್ಲದೆ ಗಲೀಜು ತುಂಬಿರುವ ಕಸದ ಬುಟ್ಟಿಗಳನ್ನ ತೋರಿಸಿ, ಜನರಿಗೆ ಯಾವ ಸಂದೇಶವನ್ನು ಕಳುಹಿಸಲು ಸಾಧ್ಯವಾಗುತ್ತದೆ. ಅದಕ್ಕಾಗಿ ನಗರಸಭೆಯವರ ದೃಷ್ಟಿ ನಗರಸಭೆ ಅಕ್ಕಪಕ್ಕ ಇರುವ ಬಸ್‌ ನಿಲ್ದಾಣದ ಮೇಲೆ ಹರಿಸಿ, ಒಮ್ಮೆ ಅಲ್ಲಿ ಕುಳಿತು ಪರಿಸ್ಥಿತಿ ಹೇಗಾಗಿದೆ ಎಂಬುದನ್ನು ಅಧ್ಯಯನ ಮಾಡಿ, ಅಧಿಕಾರಿಗಳು ಅದರ ಸ್ವಚ್ಛತೆ ಬಗ್ಗೆ ಗಮನ ಹರಿಸಬೇಕು ಎಂದರು.

Leave a Reply

Your email address will not be published. Required fields are marked *

error: Content is protected !!