ಉದಯವಾಹಿನಿ, ಕಲಬುರಗಿ: ಜಿಲ್ಲೆಯ ಫಿರೋಜಾಬಾದ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆ, ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಸರಕಾರಿ ಕನ್ನಡ ಮತ್ತು ಉರ್ದು ಪ್ರೌಢ ಶಾಲೆಗಳಿಗೆ ಗುಲಬರ್ಗಾ ಸಿಮೆಂಟ್ ಲಿಮಿಟೆಡ್ ಕಂಪನಿ ವತಿಯಿಂದ ಶುಕ್ರವಾರ ಕುರ್ಚಿ, ಮೇಜು, ಟೇಬಲ್, ಮಕ್ಕಳಿಗಾಗಿ ಊಟದ ತಟ್ಟೆ, ಗ್ಲಾಸ್ ಹಾಗೂ ಕ್ರೀಡಾ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು.
ಫಿರೋಜಾಬಾದ ಗ್ರಾಪಂ ಅಧ್ಯಕ್ಷ ರಾಜು ಹಾಲು ಹಾಗೂ ಸದ್ಯಸರು, ಫಿರೋಜಾಬಾದ ಮಾಜಿ ಗ್ರಾಪಂ ಅಧ್ಯಕ್ಷ ಲತೀಫ್ ಜಹಗೀದಾರ, ಎಸ್.ಡಿ..ಎಂ.ಸಿ ಅಧ್ಯಕ್ಷ ಶಿವಶರಣಪ್ಪ ಬೇವಿನಗಿಡ ಹಾಗೂ ಸದ್ಯಸ್ಯರು, ಕಂಪನಿಯ ಮುಖ್ಯಸ್ಥ ಸುನೀಲಕುಮಾರ, ಸಿಮೆಂಟ್ ಲಿಮಿಟೆಡ್ ಕಂಪನಿ ಆರ್.ಕೆ. ನಾಗೇಶ, ಜನರಲ್ ಮ್ಯಾನೇಜರ್ ಪಿ. ಶ್ರೀನಿವಾಸ್, ದಿನೇಶ ಭೋಹರಾ, ಶಾಲೆಯ ಮುಖ್ಯಗುರುಗಳು ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.
