ಉದಯವಾಹಿನಿ, ಮೈಸೂರು: ನಾಡಹಬ್ಬ ದಸರಾಗೆ ಭರದ ಸಿದ್ಧತೆ ನಡೆಯುತ್ತಿದ್ದು, ಪ್ರಯಾಣ ಮಾಡಿ ವಿಶ್ರಾಂತಿಯಲ್ಲಿದ್ದ ಗಜಪಡೆ ಇಂದು ಅದ್ಧೂರಿಯಾಗಿ ಅರಮನೆ ಪ್ರವೇಶಿಸಿದೆ. ಆನೆಗಳ ಆಗಮನದಿಂದ ದಸರಾ ವೈಭವ ಸಾಂಸ್ಕೃತಿಕ ನಗರಿಯಲ್ಲಿ ಕಳೆಗಟ್ಟಿದೆ. ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಗಜಪಡೆಗೆ ಶಾಸೋಕ್ತವಾಗಿ ಪೂಜೆ ಸಲ್ಲಿಸಿ ಅದ್ಧೂರಿಯಾಗಿ ಸ್ವಾಗತ ಕೋರಲಾಯಿತು.

ವೀರನಹೊಸಳ್ಳಿ ಕ್ಯಾಂಪ್ನಿಂದ ಪ್ರಯಾಣ ಬೆಳೆಸಿ ನಗರದ ಅಶೋಕಪುರಂನ ಅರಣ್ಯ ಭವನದಲ್ಲಿ ತಂಗಿದ್ದ ಆನೆಗಳಿಗೆ ಇಂದು ಅರಣ್ಯ ಇಲಾಖೆ ವತಿಯಿಂದ ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು. ಅಲ್ಲಿಂದ ಕಾಲ್ನಡಿಗೆ ಮೂಲಕ ಗಜಪಡೆ ಅರಮನೆಯತ್ತ ಹೆಜ್ಜೆ ಹಾಕಿದವು. ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಏಕಲವ್ಯ, ಭೀಮ, ಕಂಜನ್, ಲಕ್ಷ್ಮಿ, ವರಲಕ್ಷ್ಮಿ, ರೋಹಿತ್, ಗೋಪಿ, ಧನಂಜಯ ಆನೆಗಳು ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿರುವುದನ್ನು ಜನರು ಕಣ್ತುಂಬಿಕೊಂಡರು. ಅರಮನೆಯ ಮಾರ್ತಾಂಡ ದ್ವಾರದ ಬಳಿ ಬೆಳಗ್ಗೆ 10.30ರಲ್ಲಿ ನಡೆದ ತುಲಾ ಲಗ್ನದಲ್ಲಿ ಗಜಪಡೆಯನ್ನು ಸ್ವಾಗತಿಸಲಾಯಿತು. ಇಂದಿನಿಂದ ಅ.12ರ ಜಂಬು ಸವಾರಿ ಮೆರವಣಿಗೆ ಮುಗಿಯುವವರೆಗೂ ಅರಮನೆಯಲ್ಲೇ ಆನೆಗಳು ವಾಸ್ತವ್ಯ ಹೂಡಲಿವೆ. ಆನೆಗಳ ತೂಕ ಪರಿಶೀಲನೆ ನಡೆಸಿದ ಅವುಗಳಿಗೆ ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ವಿಶೇಷ ಆಹಾರ ನೀಡಿ ತಾಲೀಮು ನಡೆಸುವ ಮೂಲಕ ಮೆರವಣಿಗೆಗೆ ಸಿದ್ಧತೆ ಮಾಡಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!