ಉದಯವಾಹಿನಿ, ಆಳಂದ: ಪಟ್ಟಣದ ಬ್ರಾಹ್ಮಣ ಸಮುದಾಯದಿಂದ ಬುಧವಾರ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಶ್ರೀ ಗುರುರಾಯರ ಭಾವಚಿತ್ರದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ನಡೆಯಿತು. ಮೆರವಣಿಗೆಯಲ್ಲಿ ಶಾಂಭವಿ ಮಹಿಳಾ, ಭಜನಾ ತಾಯಂದಿರ ಮತ್ತು ತೆಲಾಕುಣಿ ಗ್ರಾಮದ ಹರಿಭಜನೆ ಮಂಡಳಿ ಸೇರಿ ಹಲವು ಭಜನೆ ವಾದ್ಯಗಳೊಂದಿಗೆ ವಿದ್ಯುಕ್ತವಾಗಿ ನೆರವೇರಿತು.
ಶ್ರೀ ಗುರುರಾಯರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಅμÉ್ಟೂೀತರ ನೆರವೇರಿಸಲಾಯಿತು. ಈ ಮೆರವಣಿಗೆ ಆರಂಭದಿಂದ ಶ್ರೀನಗರೇಶ್ವರ ರಾಮ ಮಂದಿರದಿಂದ ಆರಂಭವಾಗಿ ಹನುಮಾನ ದೇವಸ್ಥಾನದಿಂದ ಹಿಂದಿರುಗಿ ದೇವಸ್ಥಾನಕ್ಕೆ ತಲುಪಿ, ಮಹಾಮಂಗಳಾರತಿ ನೆರವೇರಿತು. ಬಳಿಕ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ರಾತ್ರಿ 8:00 ಗಂಟೆಗೆ ಪಲ್ಲಕ್ಕಿ ಸೇವೆ ನೆರವೇರಿತು. ಆರಾಧನಾ ಮಹೋತ್ಸವದಲ್ಲಿ ಬ್ರಾಹ್ಮಣ ಸಮಾಜದ ತಾಲೂಕು ಅಧ್ಯಕ್ಷ ವಿಜಯಕುಮಾರ್ ಕೋಥಳಿಕರ್, ಭೀಮಶಂಕರ ರಾಜೋಳಕರ್, ತ್ರಿಮೂರ್ತಿ ತರುಣ ಮಂಡಳಿಯ ಕಿಶೋರ್ ಸಂಗೊಳ್ಳಿಕರ್, ಗುಂಡೇರಾವ್ ಪೋದ್ದಾರ, ಸತ್ಯನಾರಾಯಣ ಕುಲಕರ್ಣಿ, ಯುವ ಮುಖಂಡ ಹನುಮಂತ ಕುಲ್ಕರ್ಣಿ, ಸುರೇಶ್ ಭಾಸ್ಕರ್‍ರಾವ್, ಅನುಪಮಾ ಕುಲ್ಕರ್ಣಿ, ಪುರಸಭೆ ಮಾಜಿ ಅಧ್ಯಕ್ಷೆ ಮೇಘಾ ಕೋಥಳಿಕರ್, ಗೀತಾ ಮಜೂಂದಾರ್, ಕವಿತಾ ಜೋಶಿ ಸೇರಿದಂತೆ ಅನೇಕ ಗಣ್ಯರು ಈ ಭಾಗವಹಿಸಿದ್ದರು.
