ಉದಯವಾಹಿನಿ, ಬೀದರ್: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆಯನ್ನು ವಿರೋಧಿಸಿ ಜಿಲ್ಲೆಯ ಗೊಂಡ(ಕುರುಬ) ಪರ ಸಂಘಟನೆಗಳು ಆಗಸ್ಟ್ 27 ರಂದು ನಗರದಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಿವೆ.
ನಗರದ ಗಾಂಧಿಗಂಜನ ಕನಕ ಭವನದಲ್ಲಿ ಗುರುವಾರ ನಡೆದ ಗೊಂಡ (ಕುರುಬ) ಪರ ಸಂಘಟನೆಗಳ ಪ್ರಮುಖರ ಸಭೆಯಲ್ಲಿ ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷಕುಮಾರ ಜೋಳದಾಪಕೆ ಈ ವಿಷಯ ಪ್ರಕಟಿಸಿದರು.
ರಾಜ್ಯಪಾಲರು ಕೇಂದ್ರ ಸರ್ಕಾರದ ಅಣತಿಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನಗೆ ಅನುಮತಿ ನೀಡಿರುವುದು ರಾಜಕೀಯ ಪ್ರೇರಿತವಾಗಿದೆ. ಹೀಗಾಗಿ, ರಾಜ್ಯಪಾಲರ ವಿರುದ್ಧ ಪ್ರತಿಭಟನೆಗೆ ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.
ಅಂದು ಬೆಳಿಗ್ಗೆ 10ಕ್ಕೆ ನಗರದ ಬೊಮ್ಮಗೊಂಡೇಶ್ವರ ವೃತ್ತದಿಂದ ಬಸವೇಶ್ವರ ವೃತ್ತ, ಮಹಾವೀರ ವೃತ್ತ, ಭಗತಸಿಂಗ್ ವೃತ್ತ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿ ರಾಷ್ಟ್ರಪತಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸಲಾಗುವುದು ಎಂದು ಹೇಳಿದರು.

ಸಮಾಜ ಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಪ್ರಮುಖರಾದ ಭೀಮಸಿಂಗ್ ಮಲ್ಕಾಪುರ, ಗೊಂಡ ಬಾಬುರಾವ್, ನರಸಪ್ಪ ಜಾನಕನೋರ, ಬಜರಂಗ ಕಾಶೆಂಪುರ, ಸಿದ್ದು ಗಾದಗೆ, ಪರಮೇಶ್ವರ ಕೊಳ್ಳೆ, ಸಿದ್ದು ಬಾವಗಿ, ಎಂ.ಪಿ. ವೈಜಿನಾಥ, ಶರಣು ಚಿಮಕೋಡ್, ಸಿದ್ದಗೊಂಡ ಸಿದ್ದೇಶ್ವರ, ಮಲ್ಲಿಕಾರ್ಜುನ ತಾಳಮಡಗಿ, ದೇವಿದಾಸ ತೋರಣವಾಡಿ, ಬಸವರಾಜ ಕುತ್ತಾಬಾದ್, ಪಂಡಿತ ಢೋಣೆ, ದಿಗಂಬರ ಮಾಸಿಮಾಡ, ಮಾರುತಿ ಗಾದಗಿ, ಗೋವಿಂದ ಮೂಲಗೆ, ವೈಜಿನಾಥ ವಡ್ಡೆ, ಆನಂದ ಸಿಕೇನಪುರೆ, ಬಸವರಾಜ ಮಾಳೆಗಾಂವ್, ರಮೇಶ ಜನವಾಡ, ವಿಜಯಕುಮಾರ ಪಾತರಪಳ್ಳಿ, ಪ್ರಕಾಶ ಗೋರನಳ್ಳಿ, ಗೋವಿಂದ ಜೋಳದಾಪಕಾ, ಗಣಪತಿ ಕಮಠಾಣ, ಸತೀಶ್ ಹೊಳಸಮುದ್ರ ಮತ್ತಿತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!