ಉದಯವಾಹಿನಿ, ಡಂಬಳ: ಹವಮಾನ ಬದಲಾವಣೆಯ ಪರಿಣಾಮ ಶನಿವಾರದಿಂದ ಪ್ರಾರಂಭವಾಗಿರುವ ಜಿಟಿಜಿಟಿ ಮಳೆ ಭಾನುವಾರ ಸಹ ಮುಂದುವರೆದಿದೆ.ನಿರಂತರವಾಗಿ ಜಿಟಿಜಿಟಿ ಮಳೆ ಆಗುತ್ತಿರುವುದರಿಂದ ಬಹುತೇಕ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ಮೋಡ ಕವಿದ ವಾತವರಣ, ಮಳೆ ಮುಂದುವರೆದಿದೆ.
ಡಂಬಳ ಕೇಂದ್ರಸ್ಥಾನ ಸೇರಿದಂತೆ ಹೋಬಳಿ ವ್ಯಾಪ್ತಿಯ ಬಹುತೇಕ ಗ್ರಾಮದಲ್ಲಿ ಇದೇ ಪರಿಸ್ಥಿತಿ ಇದೆ.ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಸುವ ಹಾಗೂ ಕಾಲುದಾರಿಯ ರಸ್ತೆ ಕೇಸರಿನಂತಾಗಿವೆ.
ಮಳೆ ಮುಂದುವರೆದರೆ ತೇವಾಂಶ ಹೆಚ್ಚಾಗಿ ಬೆಳೆ ವಿವಿಧ ರೋಗಗಳಿಗೆ ತುತ್ತಾಗಿ ಕೊಳೆಯವ ಸ್ಥಿತಿ ಬರುವ ಆತಂಕದಲ್ಲಿ ರೈತ ಸಮುದಾಯವಿದೆ.
ಕಪ್ಪತ್ತಮಲ್ಲೇಶ್ವರನ ಜಾತ್ರೆಗೆ ಹೋಗಿ ವಾಪಸ್ ಬರುವಾಗ ಡಂಬಳದಲ್ಲಿ ಮಳೆ ಸುರಿಯುತ್ತಿದ್ದ ಸಮಯದಲ್ಲಿ ಟ್ರಾಕ್ಟರನಲ್ಲಿ ತಾಡಪತ್ರೆಯ ರಕ್ಷಣೆಯಲ್ಲಿ ಮನೆಗೆ ಹೋಗುತ್ತಿರುವ ಭಕ್ತರು.

Leave a Reply

Your email address will not be published. Required fields are marked *

error: Content is protected !!