ಉದಯವಾಹಿನಿ, ಕಳಸ : ಅರಣ್ಯ ಭೂಮಿ ಒತ್ತುವರಿ ತೆರವು ವಿರೋಧಿಸಿ ಬೆಳೆಗಾರರ ಸಂಘ ಮತ್ತು ಒತ್ತುವರಿ ಹೋರಾಟ ಸಮಿತಿಯು ಕರೆ ನೀಡಿದ್ದ ‘ಕಳಸ ಬಂದ್’ ಬುಧವಾರ ಯಶಸ್ವಿಯಾಯಿತು.
ಬೆಳಿಗ್ಗೆ ಅಂಗಡಿಗಳು, ಶಾಲಾ-ಕಾಲೇಜುಗಳು ಮುಚ್ಚಿದ್ದವು. ಸಂಜೆ 4ರ ನಂತರ ಅಂಗಡಿಗಳು ತೆರೆದವು.
ಕಳಸೇಶ್ವರ ದೇವಸ್ಥಾನದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿಕರು ಭಾಗವಹಿಸಿದ್ದರು.
‘ಮಲೆನಾಡಿನ ಕಾಫಿ ತೋಟಗಳು ಅರಣ್ಯದ ಸ್ವರೂಪದಲ್ಲೇ ಇವೆ ಎಂದು ಸರ್ಕಾರದ ಗಮನಕ್ಕೆ ತರಲಾಗಿದೆ. ಸದ್ಯಕ್ಕೆ ಯಾವುದೇ ಭೂಮಿ ತೆರವು ಮಾಡದಂತೆ ಅರಣ್ಯ ಸಚಿವರಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ರಾಜಕೀಯ ಪ್ರೇರಿತ ವದಂತಿ ನಂಬಬಾರದು’ ಎಂದು ಶಾಸಕ ಟಿ.ಡಿ.ರಾಜೇಗೌಡ ಮನವಿ ಮಾಡಿದರು.
‘ಅರಣ್ಯ ಅಧಿಕಾರಿಗಳು ರೈತರ ಭೂಮಿ ತೆರವು ಮಾಡುವ ಯತ್ನ ಮಾಡಿದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸುತ್ತೇನೆ’ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಸಿದರು.ಮುಖಂಡರಾದ ಪ್ರಮೋದ್ ಮಧ್ವರಾಜ್, ದೀಪಕ್ ದೊಡ್ಡಯ್ಯ, ಜಿ.ಕೆ.ಮಂಜಪ್ಪಯ್ಯ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!