ಉದಯವಾಹಿನಿ, ಹೆಬ್ರಿ: ದೊಂಡೆರಂಗಡಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ವತಿಯಿಂದ ನಡೆದ 31ನೇ ವರ್ಷದ ಗಣೇಶೋತ್ಸವವು ಕೆ.ರಮಾನಂದ ಹೆಗ್ಡೆ ಸ್ಮಾರಕ ಕಲಾ ರಂಗಮಂಟಪದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.ಭಜನಾ ತಂಡಗಳು, ಶ್ರೀಲಕ್ಷ್ಮಿ ಜನಾರ್ದನ ಯಕ್ಷಗಾನ ಕಲಾ ಸಂಘ ದೊಂಡೇರಂಗಡಿ ವತಿಯಿಂದ ‘ಮಹಿಷ ಮರ್ಧಿನಿ’ ಯಕ್ಷಗಾನ, ತಾಳಮದ್ದಳೆ ‘ಕೋಟಿ ಚೆನ್ನಯ’, ಶಾಲಾ ಮಕ್ಕಳು ಮತ್ತು ಸಾರ್ವಜನಿಕರಿಂದ ನೃತ್ಯ ವೈಭವ, ಕಾರ್ಕಳ ಡೆನ್ನಾನ ಕಲಾವಿದರಿಂದ ತುಳು ಜಾನಪದ ಶೈಲಿಯ ಹಾಸ್ಯ ನಾಟಕ ‘ಡೆನ್ನಾನ’, ಉಡುಪಿ ಕಲಾಮಯಂನಿಂದ ‘ಜಾನಪದ ಕಲರವ’ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕಾರ್ಕಳದ ಕಾಳಿಕಾ ಚೆಂಡೆ ಬಳಗ ಮತ್ತು ಅಂಬಾಭವಾನಿ ಚೆಂಡೆ ಬಳಗ, ಕೊಂಬುವಾದನ, ತಾಸೆ, ನಾಗಸ್ವರ ವಾದನ, ನಾಸಿಕ್ ಬ್ಯಾಂಡ್, ಬಣ್ಣದ ಹುಲಿವೇಷ, ಮರಕಾಲು ಹುಲಿವೇಷ, ಚಿತ್ರಸಿರಿ ಆರ್ಟ್ ಹಿರಿಯಡ್ಕ ಇವರಿಂದ ವಿವಿಧ ಸ್ತಬ್ಧಚಿತ್ರ, ನೃತ್ಯ ತಂಡದೊಂದಿಗೆ ದೇವರ ಪುರ ಮೆರವಣಿಗೆ ನಡೆಯಿತು. ತೀರ್ಥೋಟ್ಟಿ ಹೊಳೆಯಲ್ಲಿ ಗಣೇಶನ ವಿಗ್ರಹದ ಜಲ ಸ್ತಂಭನ ನಡೆಯಿತು.
