ಉದಯವಾಹಿನಿ, ಮೈಸೂರು: ಪ್ರಜಾಪ್ರಭುತ್ವದ ಹಬ್ಬವನ್ನು ವಿಭಿನ್ನವಾಗಿ ಆಚರಿಸುವ ನಿಟ್ಟಿನಲ್ಲಿ ಮೈಸೂರಲ್ಲಿ 58 ಕಿ.ಮೀ ಐತಿಹಾಸಿಕ ಮಾನವ ಸರಪಳಿ ನಿರ್ಮಿಸಿ ಗಮನ ಸೆಳೆದರಲ್ಲದೇ ಗಜಪಡೆಯ ಆನೆಗಳು ಬಾಗವಹಿಸಿದ್ದು ವಿಶೇಷ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಬೃಹತ್ ಮಾನವ ಸರಪಳಿ ಕಾರ್ಯಕ್ರಮವನ್ನು ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂಬಾಗ ಶಾಸಕ ತನ್ವೀರ್ ಸೇಠ್ ಉದ್ಘಾಟಿಸಿದರು.

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ 60ಸಾವಿರಕ್ಕೂ ಮಂದಿ ಅಧಿಕ ಭಾಗಿಯಾಗಿದ್ದರು. ಪೌರ ಕಾರ್ಮಿಕರು, ಹೋಟೆಲ ಮಾಲೀಕರ ಸಂಘಟನೆ, ಆಟೋ ಚಾಲಕರ ಸಂಘಟನೆ, ಟ್ಯಾಕ್ಸಿ ಚಾಲಕರು, ದಲಿತ ಸಂಘರ್ಷ ಸಮಿತಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಎಲ್ಲಾ ಇಲಾಖೆಯ ಸರ್ಕಾರಿ ನೌಕರರು ಸೇರಿ 30 ಕ್ಕೂ ಸಂಘಟನೆಗಳು ಭಾಗವಹಿಸಿ ಸಂಭ್ರಮಿಸಿದವು. ಬೆ.9.30 ರಿಂದ 9,37 ರವರಗೆ ಮಾನವ ಸರಪಳಿಯಲ್ಲಿ ಸರತಿ ಸಾಲಿನಲ್ಲಿ ನಿಂತರು. ಬಳಿಕ ನಾಡಗೀತೆ ಮಾಡಲಾಯಿತು. ಸಂವಿಧಾನದ ಪ್ರಸ್ತಾವನೆ ಓದಲಾಯಿತು. 10 ಗಂಟೆಗೆ ಮಾನವ ಸರಪಳಿಯಲ್ಲಿಯೇ ಏಕಕಾಲದಲ್ಲಿ ತಮ್ಮ ಎರಡೂ ಕೈಗಳನ್ನು ಮೇಲೆತ್ತಿ ಜೈಹಿಂದ್, ಜೈ ಕರ್ನಾಟಕ ಘೋಷಣೆ ಕೂಗಲಾಯಿತು.

ಕಳಸ್ತವಾಡಿ ಸಿದ್ದಲಿಂಗ ಪುರದಿಂದ ಪ್ರಾರಂಭವಾಗಿ ಮಣಿಪಾಲ್ ಆಸ್ಪತ್ರೆ, ಪೌಂಟನ್ ಸರ್ಕಲ್, ಗಾಂಧಿ ನಗರದ ಅಂಬೇಡ್ಕರ್ ವೃತ್ತ, ಟೌನ್ ಹಾಲ್, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ, ಹಾರ್ಡಿಂಜ್ ಸರ್ಕಲ್, ಮೃಗಾಲಯ, ರೇಸ್ ಕೋರ್ಸ್ ಸರ್ಕಲ್, ಪೆÇಲೀಸ್ ಭವನ, ಸಂಗೊಳ್ಳಿ ರಾಯಣ್ಣ ಸರ್ಕಲ್, ಕಮಾನ್ ಗೇಟ್, ರಿಂಗ್ ರಸ್ತೆ, ವರುಣ ಗ್ರಾಮ, ಕೀಳನ ಪುರ, ಕೆಂಪಯ್ಯನ ಹುಂಡಿ, ಇಂಡುವಾಳು, ಗರ್ಗೇಶ್ವರಿ, ತಿ.ನರಸೀಪುರ ಟೌನ್, ಗಂಜಾಂ ನರಸಿಂಹ ಸ್ವಾಮಿ ದೇವಸ್ಥಾನ, ಅಲಗೂಡು, ಕುರಬೂರು, ಮಾಡ್ರಳ್ಳಿ ಗೇಟ್, ಮೂಗೂರು ಗ್ರಾಮದ ಮೂಲಕ ಚಾಮರಾಜನಗರ ಜಿಲ್ಲೆಯ ಗಡಿ ಪ್ರವೇಶಿಸಿತು.

Leave a Reply

Your email address will not be published. Required fields are marked *

error: Content is protected !!