ಉದಯವಾಹಿನಿ,ಬೆಂಗಳೂರು: ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಕೆಲವು ಅಧಿಕಾರಿಗಳು ಹಾಗೂ ಸಿಬ್ಬಂದಿಗಳೇ ನಟ ದರ್ಶನ್‌, ರೌಡಿ ವಿಲ್ಸನ್‌ಗಾರ್ಡನ್‌ ನಾಗ ಹಾಗೂ ಇತರರಿಗೆ ಆತಿಥ್ಯ ನೀಡಿದ್ದಾರೆಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಕಾರಾಗೃಹದೊಳಗೆ ರಾಜಾತಿಥ್ಯದ ಬಗ್ಗೆ ತನಿಖೆ ನಡೆಸುತ್ತಿರುವ ಮೂರು ತಂಡಗಳು ತಮ ತನಿಖೆಗಳನ್ನು ತೀವ್ರಗೊಳಿಸಿದ್ದು, ತನಿಖೆ ಅಂತಿಮ ಹಂತಕ್ಕೆ ಬಂದಿದೆ.ನಟ ದರ್ಶನ್‌, ರೌಡಿ ವಿಲ್ಸನ್‌ಗಾರ್ಡನ್‌ ನಾಗ ಹಾಗೂ ಇತರರು ಕಾರಾಗೃಹದ ಆವರಣದಲ್ಲಿ ಚೇರ್‌ನಲ್ಲಿ ಕುಳಿತು ಟೀಪಾಯಿ ಇಟ್ಟುಕೊಂಡು, ಕೈಯಲ್ಲಿ ಕಾಫಿ ಹಾಗೂ ಸಿಗರೇಟ್‌ ಹಿಡಿದಿರುವಂತಹ ಫೋಟೋ ಗಳು ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಹಾಗಾಗಿ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಈ ಬಗ್ಗೆ ಮೂರು ಪ್ರಕರಣಗಳು ದಾಖಲಾದವು. ಆ ಪೈಕಿ 2 ಪ್ರಕರಣಗಳಲ್ಲಿ ದರ್ಶನ್‌ ಹೆಸರನ್ನು ಉಲ್ಲೇಖಿಸಲಾಗಿದೆ.ದರ್ಶನ್‌ ಹಾಗೂ ರೌಡಿ ನಾಗನಿಗೆ ಟೀ, ಸಿಗರೇಟ್‌, ಚೇರ್‌ ಕೊಟ್ಟವರ್ಯಾರು ಎಂಬುವುದರ ಬಗ್ಗೆ ಹುಳಿಮಾವು ಠಾಣೆ ಇನ್‌್ಸಪೆಕ್ಟರ್‌ ತನಿಖೆ ನಡೆಸುತ್ತಿದ್ದಾರೆ.ಜೈಲಿನ ಕೆಲವು ಅಧಿಕಾರಿಗಳು ಹಾಗೂ ಸಿಬ್ಬಂದಿಗಳೇ ರೌಡಿ ವಿಲ್ಸನ್‌ಗಾರ್ಡನ್‌ ನಾಗನ ಮೂಲಕ ಇವೆಲ್ಲವನ್ನು ಸರಬರಾಜು ಮಾಡಲಾಗಿದೆ ಎಂಬುದು ಗೊತ್ತಾಗಿದೆ.ಅಲ್ಲದೆ ಕಾರಾಗೃಹದೊಳಗೆ ರೌಡಿ ಶೀಟರ್‌ ಮಗ ಸತ್ಯನೊಂದಿಗೆ ನಟ ದರ್ಶನ್‌ ವಿಡಿಯೋಕಾಲ್‌ನಲ್ಲಿ ಮಾತನಾಡಿರುವ ಬಗ್ಗೆ ಬೇಗೂರು ಠಾಣೆ ಇನ್‌್ಸಪೆಕ್ಟರ್‌ ತನಿಖೆ ನಡೆಸುತ್ತಿದ್ದಾರೆ.ವುದು ಕಂಡುಬಂದಿದೆ.

Leave a Reply

Your email address will not be published. Required fields are marked *

error: Content is protected !!