ಉದಯವಾಹಿನಿ, ಬೆಂಗಳೂರು: ಹಣವಂತರು, ಮತೀಯವಾದಿ, ಕೋಮುವಾದಿ ಶಕ್ತಿಗಳು ಪ್ರಜಾಪ್ರಭುತ್ವವನ್ನು ದಮನ ಮಾಡದಂತೆ ತಡೆಯುವ, ರಕ್ಷಿಸುವ ಶಕ್ತಿ ಜನಸಾಮಾನ್ಯರು, ಮತದಾರರ ಕೈಯಲ್ಲಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು. ವಿಧಾನಸೌಧ ಮಹಾದ್ವಾರದ ಮೆಟ್ಟಿಲು ಬಳಿ ಭಾನುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಜನರಿಗಿರುವ ಶಕ್ತಿ ಬಗ್ಗೆ ಜಾಗೃತಿ ಮೂಡಿಸಿ ಪ್ರಜಾಪ್ರಭುತ್ವದ ಬಲವರ್ಧನೆಗೆ ರಾಜ್ಯ ಸರ್ಕಾರ ದೃಢ ಸಂಕಲ್ಪ ಮಾಡಿದೆ.
ಪ್ರಜಾತಂತ್ರ ವ್ಯವಸ್ಥೆಗೆ ಸಂವಿಧಾನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮಹತ್ವ ನೀಡಿದರು. ಸ್ವಾತಂತ್ರ್ಯ, ಸಮಾನತೆ, ನ್ಯಾಯ, ಭಾತೃತ್ವ, ಉಪಾಸನೆ, ಧಾರ್ವಿುಕ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರಜಾಪ್ರಭುತ್ವದ ಜೀವಾಳವಾಗಿದೆ ಎಂದರು. ಪ್ರಪಂಚದ ಯಾವುದೇ ದೇಶದಲ್ಲಿಲ್ಲದ ದೊಡ್ಡ ಪ್ರಜಾಪ್ರಭುತ್ವ ಆಡಳಿತ ಭಾರತದಲ್ಲಿದೆ. ಬುದ್ಧ, ಬಸವ ಕಾಲದಿಂದಲೂ ನಮ್ಮಲ್ಲಿ ಪ್ರಜಾಪ್ರಭುತ್ವವಿದೆ. ಸಮಾನತೆಯಿಂದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಡಾ.ಬಿ.ಆರ್.ಅಂಬೇಡ್ಕರ್ ಕಂಡುಕೊಂಡಿದ್ದರು ಎಂದರು.
ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮಾತನಾಡುತ್ತಿದ್ದ ವೇಳೆ ವೇದಿಕೆ ಮುಂಬದಿ ಆಸನದಲ್ಲಿ ಕುಳಿತಿದ್ದ ಆಗಂತುಕ ಯುವಕನೊಬ್ಬ ದಿಢೀರ್ ವೇದಿಕೆಯತ್ತ ನುಗ್ಗಿದ. ಇದರಿಂದಾಗಿ ಸಿಎಂ, ಸಚಿವರು ಕ್ಷಣಕಾಲ ಗಲಿಬಿಲಿಗೆ ಒಳಗಾದರು. ಕೂಡಲೇ ಮುಖ್ಯಮಂತ್ರಿ ಅಂಗರಕ್ಷಕರು, ಯುವಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಯುವಕನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಿಸಿದಾಗ ಕನಕಪುರ ನಿವಾಸಿ, ಖಾಸಗಿ ಕಂಪನಿಯೊಂದರ ಉದ್ಯೋಗಿ ಮಹಾದೇವ ಎಂದು ಗೊತ್ತಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಭಿಮಾನಿ. ಶಾಲು ಹೊದಿಸಿ ಸನ್ಮಾನಿಸಲು ವೇದಿಕೆ ಏರಿದ್ದೆನೆಂಬ ಮಾಹಿತಿ ನೀಡಿದ್ದಾನೆ.ಅಭಿಯಾನವು ದೇವದುರ್ಗ ತಾಲೂಕು ಆಡಳಿತ ಅಸಮರ್ಪಕ ನಿರ್ವಹಣೆಯಿಂದಾಗಿ ಜನರಲ್ಲಿ ಗೊಂದಲ ಮೂಡಿಸಿತು.
