ಉದಯವಾಹಿನಿ, ಬೆಂಗಳೂರು: ಸ್ವಾತಂತ್ರ್ಯ ಪೂರ್ವದಲ್ಲಿ ಸಮರ್ಪಕ ವೈದ್ಯಕೀಯ ಚಿಕಿತ್ಯೆ ಲಭ್ಯವಿರಲಿಲ್ಲ, ಆಧುನಿಕ ವೈದ್ಯ ಪದ್ಧತಿಯಿಂದ ಮನುಷ್ಯರ ಜೀವಿತ ಅವಧಿ ಹೆಚ್ಚಳವಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಜಯನಗರದ ಎನ್.ಎಮ್.ಕೆ.ಆರ್.ವಿ.ಕಾಲೇಜು ಮಂಗಳ ಮಂಟಪದಲ್ಲಿ ಇಂಟರ್ ನ್ಯಾಷನಲ್ ಸೊಸೈಟಿ ಆಫ್ ಜೀನ್ ಮತ್ತು ಸೆಲ್ ಥೆರಪಿಯ ೬ನೇ ವಾರ್ಷಿಕ ಸಮ್ಮೇಳನ ಬಯೋ ಕಾನ್ಫರೆನ್ಸ್ ೨೦೨೪ ಎರಡು ದಿನಗಳ ಅಂತರಾಷ್ಟ್ರೀಯ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಜೀನ್ ಥೆರಪಿ ಸಂಶೋಧನೆಯಿಂದ ವೈದ್ಯಕೀಯ ಲೋಕದಲ್ಲಿ ಹಲವಾರು ರೋಗ ವಾಸಿ ಮಾಡಲು ಅನುಕೂಲವಾಗಿದೆ. ವಿಜ್ಞಾನ ಕ್ಷೇತ್ರದಲ್ಲಿ ನೂತನ ಅವಿಷ್ಕಾರವಾಗುತ್ತಿದೆ. ಸಂಪ್ರಾದಯಿಕ ವೈದ್ಯಕೀಯ ಪದ್ಧತಿ ಎಲ್ಲ ದೇಶಗಳಲ್ಲಿ ಇದೆ ಎಂದು ತಿಳಿಸಿದರು.
ಮೈಕ್ರೋಸ್ಕೂಪ್ ಮೂಲಕ ನೋಡಿದಾಗ ಜೀವಾಣುಗಳ ಕಾರ್ಯಚಾಲನೆ ಏನು ಎಂಬುದು ತಿಳಿಯುತ್ತದೆ. ವಿಜ್ಞಾನ ಕ್ಷೇತ್ರದಲ್ಲಿ ಹಲವಾರು ರೋಗಗಳಿಗೆ ಚಿಕಿತ್ಯೆ ಕಂಡುಹಿಡಿದಿರುವ ಕಾರಣದಿಂದ ಮನುಷ್ಯರ ಜೀವಿತ ಅವಧಿ ಹೆಚ್ಚಾಗಿದೆ.
ಸಂದರ್ಭದಲ್ಲಿ ಮದುವೆಯಾಗುವುದರಿಂದ ಜೀನಿಟಿಕ್ ಸಮಸ್ಯೆ ಬರಲಿದೆ ಅದನ್ನ ಪರೀಕ್ಷೆ ಮೂಲಕ ನಿವಾರಣೆ ಮಾಡಿಕೊಳ್ಳಬೇಕು ಎಂದರು.
ಜೀನ್ ಥೆರಪಿಯಿಂದ ಹಲವಾರು ರೋಗಗಳಿಗೆ ಉತ್ತಮ ಪರಿಹಾರ ನೀಡಬಹುದು ಈ ನಿಟ್ಟಿನಲ್ಲಿ ರಾಜ್ಯ ಆರೋಗ್ಯ ಇಲಾಖೆ ಸಹಕಾರ ನೀಡಲಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಆರ್.ವಿ.ಸಂಸ್ಥೆಗಳ ಅಧ್ಯಕ್ಷರಾದ ಡಾ.ಎಂ.ಪಿ.ಶ್ಯಾಮ್, ಚಲನಚಿತ್ರ ನಟ ಮಯೂರ್ ಪಟೇಲ್, ಡಾ.ಅಗರವಾಲ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕಿ ಡಾ.ಸುನೀತ ಅಗರವಾಲ್, ಶ್ವಾನ ಪ್ರೇಮಿ ಸತೀಶ್ ಕ್ಯಾಡಬೊಮ್ಸ್, ಡಾ.ಸುಬ್ರಮ್ಯಣಂ, ಡಾ.ಸತ್ಯಪ್ರಭ, ರುಬಿನ್ ರಾಜ್, ಡಾ.ಬೃಂದಾದೇವಿ, ಡಾ.ವಿದ್ಯಾ ನಿರಂಜನ್, ಡಾ.ಭುವನೇಶ್ವರಿ, ಪುವನೇಶ್ವರಿ, ಜಯರಾಮ್ ರೆಡ್ಜಿ, ಪಾಚಮುತ್ತು ಅಣ್ಣಮಲೈ, ನೇಹಾರಾಟಿ, ಉಮೇಶ್ ಪಾಂಡೆರವರು ಸಮಾವೇಶದಲ್ಲಿ ಇದ್ದರು.

 

Leave a Reply

Your email address will not be published. Required fields are marked *

error: Content is protected !!