ಉದಯವಾಹಿನಿ, ಬೆಂಗಳೂರು : ಬಿಜೆಪಿ ಮತ್ತು ಜೆಡಿಎಸ್‌‍ ನಾಯಕರ ವಿರುದ್ಧದ ಸರಣಿ ಲೈಂಗಿಕ ಹಗರಣಗಳ ಆರೋಪಗಳು ರಾಜ್ಯದಲ್ಲಿ ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟು ಮಾಡಿದ್ದು, ಅಲ್ಲದೆ ಕಾರ್ಯಕರ್ತರಲ್ಲೂ ಅಸಮಾಧಾನ ಮತ್ತು ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ. ಅಲ್ಲದೆ ಈ ಆರೋಪಗಳಿಂದಾಗಿ ವಿರೋಧ ಪಕ್ಷಗಳ ನೈತಿಕ ಬಲವನ್ನು ಕುಗ್ಗಿದ್ದು, ಸರ್ಕಾರದ ವಿರುದ್ಧ ಹೋರಾಟ ರೂಪಿಸಲು ಹಿನ್ನಡೆ ಉಂಟು ಮಾಡಿದೆ. ರಮೇಶ ಜಾರಕಿಹೊಳಿ, ಪ್ರಜ್ವಲ್‌ ರೇವಣ್ಣ, ಸೂರಜ್‌ ರೇವಣ್ಣ, ರೇವಣ್ಣ, ಮುನಿರತ್ನ ಅವರ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ, ಬಂಧನ ಪ್ರಸಂಗ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಹಿಡಿದ ಕಾಂಗ್ರೆಸ್‌‍ ತಪ್ಪುಗಳನ್ನು ಜನರ ಮುಂದೆ ತಂದು, ಮುಜುಗರಕ್ಕೀಡು ಮಾಡಬೇಕಾದ ಬಿಜೆಪಿ ಮತ್ತು ಜೆಡಿಎಸ್‌‍ ನಾಯಕರನ್ನು ಮುಖ ಮುಚ್ಚಿಕೊಂಡು ಓಡಾಡಬೇಕಾದ ಸನ್ನಿವೇಶಕ್ಕೆ ತಂದು ನಿಲ್ಲಿಸಿದೆ.
ಇದರ ಜೊತೆಯಲ್ಲಿ ತಮ ವಿರುದ್ಧದ ಯಾವುದೇ ಅಕ್ಷೇಪಾರ್ಹ ವಿಡಿಯೋಗಳು ಬಿಡುಗಡೆ ಮಾಡಬಾರದು ಎಂದು ಕೋರ್ಟ್‌ ಗೆ ಹೋಗಿ ತಡೆ ತಂದಿರುವ ಅರ್ಧ ಡಜನ್‌ ಗೂ ಹೆಚ್ಚಿನ ನಾಯಕರು ಬಿಜೆಪಿಯಲ್ಲಿದ್ದಾರೆ. ಈ ಪೈಕಿ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಕೂಡಾ ಒಳಗೊಂಡಿದ್ದಾರೆ.
ಈ ನಡುವೆ ಮಾಜಿ ಸಿಎಂ ಬಿಎಸ್‌‍ ಯಡಿಯೂರಪ್ಪ ಅವರ ವಿರುದ್ಧ ಪೋಕ್ಸೋ ಪ್ರಕರಣವೂ ದಾಖಲಾಗಿದೆ. ಮಹಿಳೆಯೊಬ್ಬರು ಈ ರೀತಿಯ ಆರೋಪವನ್ನು ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎಸ್‌‍ವೈ ಬಂಧನಕ್ಕೆ ನ್ಯಾಯಾಲಯ ತಡೆ ನೀಡಿದೆ.

ಪ್ರಜ್ವಲ್‌ ರೇವಣ್ಣ, ಎಚ್‌.ಡಿ.ರೇವಣ್ಣ ಮತ್ತು ಸೂರಜ್‌ ರೇವಣ್ಣ ವಿರುದ್ಧ ಗಂಭೀರ ಸ್ವರೂಪದ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿತ್ತು. ಈ ಪ್ರಕರಣದಲ್ಲಿ ಎಚ್‌.ಡಿ/ರೇವಣ್ಣ ಮತ್ತು ಸೂರಜ್‌ ರೇವಣ್ಣಗೆ ಜಾಮೀನು ಸಿಕ್ಕರೆ, ಪ್ರಜ್ವಲ್‌ ರೇವಣ್ಣ ಜೈಲಿನಲ್ಲಿ ಬಂಧನದಲ್ಲಿದ್ದಾರೆ.
ಈ ಪ್ರಕರಣ ಬಿಜೆಪಿ ಮತ್ತು ಜೆಡಿಎಸ್‌‍ಗೆ ಮುಜುಗರ ಉಂಟು ಮಾಡಿದೆ.

Leave a Reply

Your email address will not be published. Required fields are marked *

error: Content is protected !!