ಉದಯವಾಹಿನಿ, ಶತಮಾನಗಳಷ್ಟು ಹಳೆಯದಾದ ಇತಿಹಾಸವನ್ನು ಹೊಂದಿರುವ ಅನೇಕ ದೇವಾಲಯಗಳು ನಮ್ಮ ಭಾರತದಲ್ಲಿವೆ. ಕೆಲವು ದೇವಾಲಯಗಳು ಎಷ್ಟು ಪುರಾತನವಾಗಿದೆ ಎಂದರೆ ಅದರ ವಾಸ್ತುಶಿಲ್ಪದ ಆಧಾರದ ಮೂಲಕವೇ ಅಂದಾಜಿಸಬೇಕು. ಶತಮಾನಗಳಿಂದಲೂ ಇಂತಹ ಅನೇಕ ಪುರಾತನ ದೇವಾಲಯಗಳಿಗೆ ನಮ್ಮ ಭಾರತ ಭೂಮಿ ಸಾಕ್ಷಿಯಾಗಿದೆ.
ಇಂದಿಗೂ ಅಂತಹ ಅದೆಷ್ಟೋ ದೇವಸ್ಥಾನಗಳನ್ನು ಭಾರತದ ಮೂಲೆ ಮೂಲೆಯಲ್ಲೂ ಕಾಣಬಹುದಾಗಿದೆ. ಅಂತಹ ಪುರಾತನ ದೇವಾಲಯಗಳಲ್ಲಿ ಗಂಗೇಶ್ವರ ಮಹಾದೇವ ದೇವಾಲಯವೂ ಒಂದು. ಇಲ್ಲಿರುವ ಶಿವಲಿಂಗಕ್ಕೆ ಪ್ರತೀ ಎರಡು ನಿಮಿಷಕ್ಕೊಮ್ಮೆ ಸಮುದ್ರದೇವ ಅಭಿಷೇಕ ಮಾಡುತ್ತಾನೆ ಇದನ್ನು ಸ್ವತಃ ಅಲ್ಲಿಗೆ ಹೋಗಿ ಕಣ್ತುಂಬಿಕೊಳ್ಳುವುದೇ ಒಂದು ಪುಣ್ಯ. ಬನ್ನಿ ಹಾಗಾದರೆ ಈ ಪುರಾಣ ಪ್ರಸಿದ್ಧ ಗಂಗೇಶ್ವರ ಮಹಾದೇವ ದೇವಸ್ಥಾನ ಮತ್ತು ಶಿವಲಿಂಗ ಎಲ್ಲಿದೆ ಎಂಬುದನ್ನು ತಿಳಿಯೋಣ…

ಎಲ್ಲಿದೆ ದೇವಸ್ಥಾನ: ಗಂಗೇಶ್ವರ ಮಹಾದೇವ ದೇವಾಲಯವು ಗುಜರಾತ್ ರಾಜ್ಯದ ಸೋಮನಾಥ ಜ್ಯೋತಿರ್ಲಿಂಗದಿಂದ ಸುಮಾರು 80 ಕಿ.ಮೀ ದೂರದಲ್ಲಿದೆ. ಖಾಸಗಿ ವಾಹನದಲ್ಲಿ ಸುಮಾರು 3 ಗಂಟೆಗಳ ಕಾಲ ಪ್ರಯಾಣಿಸಿದರೆ ಈ ಪುಣ್ಯಸ್ಥಳವನ್ನು ತಲುಪಬಹುದು. ಮತ್ತು ಇದು ಅರಬ್ಬೀ ಸಮುದ್ರದ ಕರಾವಳಿಯ ಫುಡಮ್ ಗ್ರಾಮದ ಕೇಂದ್ರಾಡಳಿತ ಪ್ರದೇಶವಾದ ದಿಯುದಿಂದ 3 ಕಿ.ಮೀ ದೂರದಲ್ಲಿದೆ.

Leave a Reply

Your email address will not be published. Required fields are marked *

error: Content is protected !!