ಉದಯವಾಹಿನಿ, ಶಹಾಪುರ: ನಗರದ ಹೊರವಲಯದ ವಾಲ್ಮೀಕಿ ಭವನ ಕಟ್ಟಡ ಕಾಮಗಾರಿಯನ್ನು ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಅವರು,’ಕಟ್ಟಡ ಕಾಮಗಾರಿ ಆರಂಭಿಸಲು ₹1 ಕೋಟಿ ಅನುದಾನ ನೀಡಿತ್ತು. ಅದರಂತೆ ಮೊದಲ ಮಹಡಿ ಕೆಲಸ ಪೂರ್ಣಗೊಂಡಿದೆ.
ಆದರೆ ಇನ್ನಿತರ ಕಾಮಗಾರಿಯಾದ ಬಾಗಿಲು, ಕಿಟಕಿ, ನೆಲಹಾಸು ಬಂಡಿ ಹಾಕಿಸಲು ಅನುದಾನದ ಕೊರತೆ ಎದುರಾದಾಗ ₹ 50 ಲಕ್ಷ ಬಿಡುಗಡೆ ಮಾಡಿದೆ. ಈಗ ಕಟ್ಟಡದ ಸುತ್ತಲೂ ಕಾಂಪೌಂಡ ಹಾಗೂ ಇನ್ನಿತರ ಅಗತ್ಯ ಕಾಮಗಾರಿ ನಿರ್ವಹಿಸಲು ಹೆಚ್ಚುವರಿಯಾಗಿ ₹75 ಲಕ್ಷ ಅನುದಾನವನ್ನು ನಗರೋತ್ಥಾನ ಯೋಜನೆ ಅಡಿಯಲ್ಲಿ ಒದಗಿಸಲಾಗುವುದು’ ಎಂದರು.ನಗರಸಭೆಯ ಎಂಜಿನಿಯರ್ ನಾನಾ ಸಾಹೇಬ ಮಡಿವಾಳಕರ್, ರಫೀಕ್ ಅಹ್ಮದ್, ವಾಲ್ಮೀಕಿ ನಾಯಕ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗೌಡಪ್ಪಗೌಡ ಆಲ್ದಾಳ, ತಾಲ್ಲೂಕು ಘಟಕದ ಅಧ್ಯಕ್ಷ ಮರೆಪ್ಪ ಪ್ಯಾಟಿ ಶಿರವಾಳ, ರವಿಕುಮಾರ ಯಕ್ಷಿಂತಿ, ಶಿವಮಹಾಂತ ಚಂದಾಪುರ, ಭೀಮಣ್ಣ ಮಾಸ್ತರ ಬೂದನೂರ ಉಪಸ್ಥಿತರಿದ್ದರು.
