ಉದಯವಾಹಿನಿ, ಲಕ್ಷ್ಮೇಶ್ವರ: ದಸರಾ ಹಬ್ಬದ ಅಂಗವಾಗಿ ಇಲ್ಲಿನ ಎಸ್‍ಎಸ್‍ಕೆ ಸಮಾಜದ ಅಂಬಾಭವಾನಿ ದೇವಸ್ಥಾನದಲ್ಲಿ ಗುರುವಾರ ವಿಜಯಕುಮಾರ ಹತ್ತಿಕಾಳ ದಂಪತಿ ಮತ್ತು ಬಾಬಣ್ಣ ವೆರ್ಣೇಕರ ದಂಪತಿ ಘಟಸ್ಥಾಪನಾ ಕಾರ್ಯಕ್ಕೆ ಚಾಲನೆ ನೀಡಿದರು.
ನಂತರ ಸಮಾರಂಭದಲ್ಲಿ ಅವರನ್ನು ದೇವಸ್ಥಾನದ ಸಮಿತಿಯವರು ಸನ್ಮಾನಿಸಿದರು.
ದೇವಸ್ಥಾನದ ಆಡಳಿತ ಮಂಡಳಿ ಉಪಾಧ್ಯಕ್ಷ ನಾರಾಯಣಸಾ ಪವಾರ ಮಾತನಾಡಿ, ‘ದಸರಾ ಮಹೋತ್ಸವದ ಅಂಗವಾಗಿ ಪ್ರತಿವರ್ಷ ಘಟಸ್ಥಾಪನೆಯನ್ನು ಊರಿನ ಮುಖಂಡರಿಂದ ನಡೆಸಿಕೊಂಡು ಬರುತ್ತಿದ್ದೇವೆ’ ಎಂದರು. ‘ಹತ್ತು ದಿನಗಳವರೆಗೆ ದೇವಸ್ಥಾನದಲ್ಲಿ ಬೆಳಿಗ್ಗೆ 5.30ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯುತ್ತವೆ. ಭಾವಸಾರ ಮತ್ತು ಗೋಂದಳಿ ಸಮಾಜದವರಿಂದ ಕಾಕಡಾರತಿ ನೆರವೇರುವುದು’ ಎಂದು ಮಾಹಿತಿ ನೀಡಿದರು. ತಿಪ್ಪಣ್ಣಸಾ ಬಾಕಳೆ, ಯಲ್ಲಪ್ಪ ಬದಿ, ಪರಶುರಾಮಸಾ ಬದಿ, ವಿಠ್ಠಲಸಾ ಶಿದ್ಲಿಂಗ್, ರಾಜೇಂದ್ರ ಚವ್ಹಾಣ, ಗಣಪತಸಾ ಪೂಜಾರಿ, ಮಹಿಳಾ ಮಂಡಳದ ಅಧ್ಯಕ್ಷೆ ಶಾಂತಾಬಾಯಿ ಪವಾರ, ತರುಣ ಸಂಘದ ಅಧ್ಯಕ್ಷ ಭರತ ಬಾಕಳೆ ಇದ್ದರು.
