ಉದಯವಾಹಿನಿ, ಪರಶುರಾಂಪುರ: ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಪತ್ನಿ ಕೊಲೆ ಮಾಡಿದ ಘಟನೆ ಹೋಬಳಿಯ ಯಾದಲಗಟ್ಟೆ ಗ್ರಾಮದಲ್ಲಿ ಈಚೆಗೆ ನಡೆದಿದೆ. ಘಟನೆ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ರಾಂಘವೆಂದ್ರ (35) ಕೊಲೆಯಾದ ವ್ಯಕ್ತಿ. ಯಾಲದಗಟ್ಟೆ ಗ್ರಾಮದ ದಿವ್ಯಾ, ಅದೇ ಗ್ರಾಮದ ರಾಜು ಹಾಗೂ ದಿವ್ಯಾ ಅವರ ಚಿಕ್ಕಪ್ಪ ಮಾರಣ್ಣ ಬಂಧಿತರು.
ಪತಿಗೆ ನಿದ್ದೆ ಮಾತ್ರೆ ನೀಡಿ ನಂತರ ಕುತ್ತಿಗೆಗೆ ಹಗ್ಗದಿಂದ ಬಿಗಿದು ರಾಜಣ್ಣ ಮತ್ತು ಮಾರಣ್ಣ ಜೊತೆ ಸೇರಿ ಈ ಕೃತ್ಯ ಎಸಗಿದ್ದಾರೆ.ದಿವ್ಯಾ ಹಾಗೂ ರಾಘವೇಂದ್ರ ಯಾದಲಗಟ್ಟೆಯಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದರು. ರಾಘವೇಂದ್ರ ಅವರಿಗೆ ಆಗಾಗ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿತ್ತು. ಆ ನೋವು ತಾಳಲಾರದೆ ಮೃತಪಟ್ಟಿದ್ದಾರೆ ಎಂದು ದಿವ್ಯಾ ಕುಟುಂಬಸ್ಥರನ್ನು ನಂಬಿಸಿದ್ದರು ಎನ್ನಲಾಗಿದೆ. ಆದರೆ, ಮರಣೋತ್ತರ ಪರೀಕ್ಷೆಯಲ್ಲಿ ಕೊಲೆ ಎಂದು ತಿಳಿದು ಬಂದಿದೆ. ಪೊಲೀಸರು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಗೊತ್ತಾಗಿದೆ. ತಳಕು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಡಿವೈಎಸ್‌ಪಿ ರಾಜಣ್ಣ ಮತ್ತು ಸಿಪಿಐ ಹನುಮಂತಪ್ಪ ನೇತೃತ್ವದ ತಂಡ ತನಿಖೆ ನಡೆಸುತ್ತಿದೆ.
