ಉದಯವಾಹಿನಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಗ್ಗೆ ಜೆಡಿಎಸ್ ಪಕ್ಷ ವ್ಯಂಗ್ಯವಾಡಿದೆ. ತೆರೆ ಹಿಂದೆ ಶಿಖಂಡಿ ಆಟವಾಡುತ್ತಿರುವ ಜೈಲು ಹಕ್ಕಿಗೆ ಸಿಎಂ ಕುರ್ಚಿ ಕೈಗೆಟುಕದ ಹುಳಿ ದ್ರಾಕ್ಷಿ..! ಎಂದು ಕಾಲೆಳೆದಿದೆ. ಹೈಕಮಾಂಡ್ ಗುಲಾಮನಾಗಿ ಕಪ್ಪ ಕಳುಹಿಸುವ ಕಲೆಕ್ಷನ್ ಏಜೆಂಟ್, ಬಂಡೆ ಕಳ್ಳನ ರಾಜಕೀಯ ಭ್ರಷ್ಟಾಚಾರದ ಇತಿಹಾಸವನ್ನು ಸಂಪುಟಗಳಲ್ಲಿ ಪ್ರಕಟಿಸಬಹುದು ಎಂದು ಹೇಳಿದೆ.
ಹೊಡಿಬಡಿ ಸಂಸ್ಕೃತಿಯ ರಿಯಲ್‌ಎಸ್ಟೇಟ್ ದಂಧೆಕೋರ, ಹವಾಲಾ ಮಾಫಿಯಾ, ಭೂಗಳ್ಳ ಅಲಿಯಾಸ್ ಸಿಡಿ ಶಿವುನ ಆಸ್ತಿ ಸಂಪಾದನೆಯ ಗುಟ್ಟು ಇಡೀ ದೇಶಕ್ಕೆ ಚಿರಪರಿಚಿತ ಎಂದು ಕುಟುಕಿದೆ. ಬೇನಾಮಿ ಆಸ್ತಿ, ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ರೌಡಿ ಕೊತ್ವಾಲನ ಶಿಷ್ಯ ಒಂದು ಕೈ ಮೇಲು ಸೋಲಾರ್ ಪಾರ್ಕ್ ಯೋಜನೆಯಲ್ಲಿ ಎತ್ತುವಳಿ ಮಾಡಿದ್ದು ಎಷ್ಟು? ಎಂದು ಪ್ರಶ್ನೆ ಮಾಡಿದೆ.
ಬ್ರ್ಯಾಂಡ್ ಬೆಂಗಳೂರು ಹೆಸರಲ್ಲಿ ದೋಚುತ್ತಿರುವ ಕಲೆಕ್ಷನ್ ಗಿರಾಕಿಯ ಘೋಷಿತ 1,413 ಕೋಟಿ ರೂ. ಆಸ್ತಿ ಗಳಿಕೆಯ ಸಿಕ್ರೇಟ್ ಇವೇ ಅಲ್ಲವೇ..? ಎಂದು ಆರೋಪ ಮಾಡಿದೆ.ಮುಡಾ ವಿಚಾರ ಡೈವರ್ಟ್ ಮಾಡಲು FIR ಹಾಕಲಾಗಿದೀಯಾ?ಕುಮಾರಸ್ವಾಮಿ ಕೊಟ್ಟ ಉತ್ತರವೇನು?
ಇತ್ತೀಚೆಗೆ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದ ಡಿ.ಕೆ.ಶಿವಕುಮಾರ್, ಎಚ್.ಡಿ.ಕುಮಾರಸ್ವಾಮಿ ಈ ರಾಜಕಾರಣ, ಬೇರೆ ಮಾತುಗಳನ್ನು ಬಿಟ್ಟು ರಾಜ್ಯದಲ್ಲಿ 1 ಲಕ್ಷ ಜನರಿಗೆ ಉದ್ಯೋಗ ನೀಡುವ ಕೆಲಸ ಮಾಡಲಿ. ನಮ್ಮ ಕಾಂಗ್ರೆಸ್ ಸರ್ಕಾರ ಅವರಿಗೆ ಸಹಕಾರ ಕೊಡುತ್ತದೆ ಎಂದಿದ್ದರು.
