ಉದಯವಾಹಿನಿ, ಬೆಂಗಳೂರು: ಪ್ರತಿಯೊಬ್ಬರಿಗೂ ಸಂವಿಧಾನಬದ್ಧ ಸಾಮಾಜಿಕ ನ್ಯಾಯ ಕೊಡುವ ಉದ್ದೇಶದಿಂದ ಜಾತಿ ಜನಗಣತಿ ಜಾರಿ ಅವಶ್ಯಕವಾಗಿದೆ ಎಂದು ವಿಧಾನ ಪರಿ ಷತ್ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾಜಿಕ ನ್ಯಾಯ ದೃಷ್ಟಿಯಿಂದ ಜಾತಿಗಣತಿ ನಡೆಯಬೇಕು. ದುರ್ಬಲರಿಗೆ ನ್ಯಾಯ ಸಿಗಬೇಕು, ಬಿಜೆಪಿ ನ್ಯಾಯ ಕೊಡುವ ದೃಷ್ಟಿಯಿಂದ ಮೀಸಲಾತಿ ಸಮರ್ಥಿಸಿಕೊಂಡಿದೆ ಎಂದು ತಿಳಿಸಿದರು. ಆದರೆ ಕಾಂಗ್ರೆಸ್ ಒಡೆದಾಳುವ ನೀತಿಯನ್ನು ಪಾಲಿಸುತ್ತಿದೆ. ಕಾಂಗ್ರೆಸ್ ನವರ ಉದ್ದೇಶ ಒಡೆಯುವುದೇ ಆಗಿದೆ. ಇದಕ್ಕೆ ಬಿಜೆಪಿ ಅವಕಾಶ ಕೊಡುವುದಿಲ್ಲ ಎಂದು ಹೇಳಿದರು.
ಜಮ್ಮು ಕಾಶ್ಮೀರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿದೆ. -ಫಲಿತಾಂಶ ಏನೇ ಬಂದರೂ ಇವಿಎಂನ್ನು ದೂರುವುದಿಲ್ಲ.ಕಾಂಗ್ರೆಸ್‍ನವರ ಪರವಾಗಿ ಬಂದರೆ ಜನರನ್ನು ಹೊಗಳುವುದು, ವಿರುದ್ದವಾಗಿ ಬಂದರೆ ತೆಗಳುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಬಿಜೆಪಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಮೇಲೆ ನಂಬಿಕೆ ಇಟ್ಟಿರುವ ಪಕ್ಷ. ದೊಡ್ಡ ಪ್ರಮಾಣದಲ್ಲಿ ಸಹಭಾಗಿತ್ವ ವ್ಯಕ್ತವಾಗಿದೆ. ಶೇ.68ರಷ್ಟು ಜನ ಬಿಜೆಪಿಗೆ ಮತ ಹಾಕಿದ್ದಾರೆ ಎಂದು ಹೇಳಿದರು.ಜಮ್ಮು ಮತ್ತು ಕಾಶ್ಮೀರದಲ್ಲಿ ಮತದಾರರು ಈ ಬಾರಿ ದೊಡ್ಡ ಪ್ರಮಾಣದಲ್ಲಿ ಮತ ಚಲಾಯಿಸಿದ್ದಾರೆ. ನಾವು ಭಾರತೀಯರ ಪರವಾಗಿ ಎಂಬುದನ್ನು ತೋರಿಸಿದ್ದಾರೆ. ಇದು ಭಾರತ ಮತ್ತು ಪ್ರಜಾಪ್ರಭುತ್ವ ವಿಜಯ ಎಂದರು. ಹರಿಯಾಣದಲ್ಲಿ ನಾವು ಮೂರನೇ ಬಾರಿಗೆ ಅ„ಕಾರ ಹಿಡಿಯುವತ್ತ ದಾಪುಗಾಲಿಟ್ಟಿದ್ದೇವೆ. ಖಂಡಿತವಾಗಿಯೂ ಬಿಜೆಪಿ ಅಲ್ಲಿ ಅ„ಕಾರಕ್ಕೆ ಬಂದೇ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!