ಉದಯವಾಹಿನಿ, ಕಾರವಾರ : ಅರಗಾದ ವಕ್ಕನಳ್ಳಿ ಬಳಿಯ ಕದಂಬ ನೌಕಾನೆಲೆ ಪ್ರದೇಶ ಬಳಿ ಕಳೆದ ರಾತ್ರಿ ಅಪರಿಚಿತ ಡ್ರೋನ್ ಹಾರಾಡಿರುವುದು ಹೊಸ ಅನುಮಾನ ಸೃಷ್ಠಿಸಿದೆ. ವಕ್ಕನಳ್ಳಿಯ ಐಎನ್‌ಎಸ್ ಪತಂಜಲಿ ಆಸ್ಪತ್ರೆಯ ಹಿಂಬದಿಯಿಂದ ಬಿಣಗಾ ಚತುಷ್ಪಥ ಹೆದ್ದಾರಿಯ ಸುರಂಗ ಮಾರ್ಗದವರೆಗೂ ಡ್ರೋನ್ ಹಾರಾಡಿದ್ದು, ಸ್ಥಳೀಯರೊಬ್ಬರ ಮೊಬೈಲ್ ಕ್ಯಾಮೆರಾದಲ್ಲಿ ಇದು ಸೆರೆಯಾಗಿದೆ.
ಸುರಕ್ಷತೆಯ ದೃಷ್ಟಿಯಿಂದ ನೌಕಾ ನೆಲೆ ಪ್ರದೇಶದಲ್ಲಿ ಡ್ರೋನ್ ಹಾಗೂ ಕ್ಯಾಮರಾ ಬಳಕೆಗೆ ನಿಷೇಧಸಲಾಗಿದೆ.ಪ್ರಸ್ತುತ ಡ್ರೋನ್ ಹಾರಾಟದ ವಿಡಿಯೋವನ್ನು ಸ್ಥಳಿಯರು ನೌಕಾನೆಲೆ ಅಧಿಕಾರಿಗಳಿಗೆ ಗಮನಕ್ಕೆ ತಂದಿದ್ದಾರೆ.ಸುಮಾರು 2-3 ಕಿ.ಮೀ ಎತ್ತರದಲ್ಲಿ ನೈಟ್ ವಿಶನ್ ಡ್ರೋನ್ ಹಾರಾಡಿದ್ದು, ಹಲವು ಸಂಶಯಕ್ಕೆ ಕಾರಣಾಗಿದೆ. ಸಾಮಾನ್ಯವಾಗಿ 600 ದಿಂದ 1,200 ಮೀ ಎತ್ತರ ಹಾರುವ ಡ್ರೋನ್ ಸ್ಥಳೀಯವಾಗಿ ಬಳಕೆ ಮಾಡಲಾಗುತ್ತೆ. ಆದರೆ, ಈ ಡ್ರೋನ್ ಸುಮಾರು 3 ಕಿ.ಮೀ.ಗೂ ಹೆಚ್ಚು ದೂರ ಹಾರಾಡಿರುವುದು ಸಂಶಯಕ್ಕೆ ಕಾರಣವಾಗಿದೆ.ಈ ಬಗ್ಗೆ ನಿಖರ ಮಾಹಿತಿ ಕಲೆ ಹಾಕಲು ನೌಕಾಪಡೆ, ರಾಜ್ಯ ಹಾಗೂ ಕೇಂದ್ರ ಗುಪ್ತಚರ ಇಲಾಖೆಗಳು ಮುಂದಾಗಿವೆ.
